ಶ್ರೀರಂಗ: ರಂಗಸಾಹಿತ್ಯ

Author : ವಿಜಯಾ

Pages 200

₹ 150.00




Year of Publication: 2002
Published by: ಇಳಾ ಪ್ರಕಾಶನ
Address: #36, 40 ಅಡಿ ರಸ್ತೆ, ರಾಘವನಗರ, ನ್ಯೂ ಟಿಂಬರ್‌ ಯಾರ್ಡ್‌ ಲೇಔಟ್‌, ಬೆಂಗಳೂರು

Synopsys

ಡಾ. ವಿಜಯಾ ಅವರು ಡಾಕ್ಟರೇಟ್‌ ಪದವಿಗೆ ಸಿದ್ಧಪಡಿಸಿದ ಸಂಶೋಧನ ಲೇಖನಗಳಿವು. ಕನ್ನಡದ ಅಪರೂಪದ ನಾಟಕಕಾರ ಶ್ರೀರಂಗ ಅವರನ್ನು ಕುರಿತಂತೆ ಹೊಸ ಕಾಣ್ಕೆಗಳನ್ನು ನೀಡುವಂತಹದು. ಪ್ರಸ್ತುತ ಕೃತಿಯು ಶ್ರೀರಂಗ ನಾಟಕಗಳನ್ನು ಕುರಿತ ವಿಜಯಾ ಅವರು ನಡೆಸಿದ ಅಧ್ಯಯನದ ಪುಸ್ತಕ ರೂಪವಾಗಿದೆ. ಇದರಲ್ಲಿ ಶ್ರೀರಂಗರ ನಾಟಕಗಳ ವಿಕಾಸ ಕ್ರಮ, ಶ್ರೀರಂಗರ ನಾಟಕಗಳು: ವಸ್ತು, ವ್ಯಾಪ್ತಿ, ಮನೋಧರ್ಮ ಮತ್ತು ನಿರ್ವಹಣೆ, ಶ್ರೀರಂಗರ ನಾಟಕಗಳ ಶಿಲ್ಪ: ಕೆಲವು ಅಭಿಪ್ರಾಯಗಳು, ಪ್ರಾಯೋಗಿಕ ವಿಮರ್ಶೆ: ಶೋಕ ಚಕ್ರ, ಕೇಳು ಜನಮೇಜಯ, ಏನು ಬೇಡಲಿ ನಿನ್ನ ಬಳಿಗೆ ಬಂದು?, ಮೌಲ್ಯಮಾಪನ-ಉಪಸಂಹಾರ ಈ ಕೃತಿಯಲ್ಲಿದೆ.

About the Author

ವಿಜಯಾ

ನಾಡಿನ ಹೆಸರಾಂತ ಪತ್ರಕರ್ತೆ, ಪ್ರಕಾಶಕಿಯಾಗಿರುವ ವಿಜಯಾ ಅವರು ದಾವಣಗೆರೆಯವರು. ಅವರು 1942 ಮಾರ್ಚಿ 10ರಲ್ಲಿ ಶ್ಯಾಮಭಟ್, ಸರೋಜಮ್ಮ ಅವರ ಮಗಳಾಗಿ ಜನಿಸಿದರು. ಸ್ನಾತಕೋತ್ತರ ಮತ್ತು ಪಿಎಚ್‌.ಡಿ ಪದವಿ ಪಡೆದ ಅವರು ಇಳಾ ಮುದ್ರಣವನ್ನು ಪ್ರಾರಂಭಿಸಿದ್ದಾರೆ. ‘ಪರ್ವ ಒಂದು ಸಮೀಕ್ಷೆ, ಇನಾಂದಾರ್: ವ್ಯಕ್ತಿ, ಕೃತಿ, ಇಂದಿನ ರಂಗಕಲಾವಿದರು (ಕನ್ನಡ ರಂಗಭೂಮಿ ಕಲಾವಿದರ ಮಾಹಿತಿ), ರಂಗ ಚಿಂತನೆ, ಕನ್ನಡ ಸಿನೆಮಾ ಸ್ವರ್ಣಮಹೋತ್ಸವ, ಮಕ್ಕಳ ಸಿನೆಮಾ, ಚಲನಚಿತ್ರರಂಗದ ೧೪ ವ್ಯಕ್ತಿ ಚಿತ್ರಣ, ಕಿರಿಯರ ಕರ್ನಾಟಕ, ಪದಾಂತರಂಗ (ಎನ್.ಕೆ. ಪದ್ಮಾದೇವಿ ಬದುಕು-ಬರಹ ಲೇಖನ ಸಂಗ್ರಹ), ಅಕ್ಕರೆ (ಎನ್. ವ್ಯಾಸರಾಯ ಬಲ್ಲಾಳರ ಅಭಿನಂದನಾ ಗ್ರಂಥ), ಕನ್ನಡ ಚಲನಚಿತ್ರ ...

READ MORE

Related Books