`ಕಾವೇರಿ ಹರಿದು ಬಂದ ದಾರಿ’ ಕೃತಿಯು ಕನ್ನಡ ಸಾಹಿತ್ಯ, ವಿಜ್ಞಾನ ಸಾಹಿತ್ಯ ಹಾಗೂ ಆರ್. ಎ. ಸಂಚಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಒಳಗೊಂಡಿದೆ. ಈ ಸಂಕಲನದಲ್ಲಿ ಸೇರಿರುವ ಲೇಖನಗಳು ಕೆಲವು ಪತ್ರಿಕೆಗಳಲ್ಲಿ ಬೆಳಕುಕಂಡಿವೆ. ಈ ಕೃತಿಯು 20 ಅಧ್ಯಾಯಗಳಾದ, ನಾಡ ನಲಿದಾಡಿಸುವ ಜೀವನದಿ ಕಾವೇರಿ, ಕಾವೇರಿ ಕಣಿವೆಯ ಜೀವಸಂಪನ್ಮೂಲ, ಮಶೀರ್ ಬೇಟೆಯ ರೋಚಕ ನೆನಪುಗಳು, ಬತ್ತುತ್ತಿರುವ ಕಾವೇರಿ, ಇಂತು ತೀರ್ಥೋದ್ಭವ, ಎಂಥ ಮರಳಯ್ಯ ಇದು ಎಂಥ ಮರಳು!, ತಲಕಾಡಿನ ಮರಳು ರಾಶಿಯತ್ತ ಹೊರಳುನೋಟ, ಕಾವೇರಿ ನದಿಯ ಭೂವೈಜ್ಞಾನಿಕ ವಿಕಾಸ, ಮೇಕೆದಾಟು; ಕಾವೇರಿಯ ಶಿಲ್ಪಕಲಾ ಶಾಲೆ, ಕಾವೇರಿಯ ಮಾಲಿನ್ಯ: ಮುಂದಿನ ಊರಿಗೆ, ಮುಂದಿನ ಪೀಳಿಗೆ, ಕಾವೇರಿ: ಗಗನದಿಂದ ಕಂಡಂತ, ಕಾವೇರಿ ನೀರಿಗೆ ರಾಜಕೀಯ ರಾಡಿ, ಕಾವೇರಿ ಮತ್ತು ನೀರಾವರಿ ಅಭಿವೃದ್ದಿ, ಕಾವೇರಿ ಕಣಿವೆಯ ಅಂತರ್ಜಲ ಸಂಪನ್ಮೂಲ, ಪರ್ಯಾಯ ಬೆಳೆ ನದಿ ನೀರಿನ ಸಮಸ್ಯೆಗೆ ಪರಿಹಾರ,ಗಂಗಾ ಕಾವೇರಿ ಸಮರ್ಪಕ ನಾಲೆ, ಅಂತರ್ ರಾಜ್ಯ ನದಿ ನೀರು ವಿವಾದ, ಅಗಸ್ತ್ಯನ ವಿವಾದ, ಅನುಬಂಧಗಳನ್ನು ಒಳಗೊಂಡಿದೆ.
©2025 Book Brahma Private Limited.