‘ಕಾಲ ಮತ್ತು ಕ್ರಿಯೆ’ ಎನ್. ರಂಗನಾಥ ಅವರು ರಚಿಸಿರುವ ಶರ್ಮಾ ಭರ್ತೃಹರಿಯ ವಾಕ್ಯಪದೀಯದ ಕಾಲ ಸಮುದ್ದೇಶ ಮತ್ತು ಕ್ರಿಯಾ ಸಮುದ್ದೇಶಗಳ ಅನುವಾದ ಮತ್ತು ವಿವರಣೆ. ಕಾಲ ಮತ್ತು ಕ್ರಿಯೆ ಎರಡು ಪ್ರತಿದಿನದ ವ್ಯವಹಾರದಲ್ಲಿ ಎಲ್ಲರಿಗೂ ಬೇಕಾದವು; ಸರ್ವರಿಗೂ ಪರಿಚಿತವಾದವು. ಹಗಲು-ರಾತ್ರಿ ಇವೆರಡು ಪರಸ್ಪರ ವಿರುದ್ಧವಾದ ಕಾಲಭೇದಗಳು. ಇವೆರಡರಲ್ಲಿಯೂ ಸೇರಿಕೊಂಡಿರುವ ಆ ಕಾಲ ಎಂಬುದು ಯಾವುದು? ಹೋಗುವುದು ಬರುವುದು, ಇವೆರಡು ವಿರುದ್ಧ ಕ್ರಿಯಾಭೇದಗಳು. ಇವೆರಡನ್ನೂ ವ್ಯಾಪಿಸಿಕೊಂಡಿರುವ ಕ್ರಿಯೆ ಯಾವುದು? ಎಂತಹ ವಿದ್ವಾಂಸನೂ ಉತ್ತರ ಹೇಳುವಾಗ ತಡವರಿಸುವ ಪ್ರಶ್ನೆಗಳಿವು. ಭೂತಕಾಲ, ವರ್ತಮಾನಕಾಲ, ಭವಿಷ್ಯತ್ ಕಾಲ ಎಂದು ಹೇಳುವಾಗ ಕಾಲದ ಸಾಮಾನ್ಯ ಸ್ವರೂಪ ಯಾವುದೆಂಬದನ್ನು ವಿವರಿಸಬೇಕಾಗುತ್ತದೆ. ಇದು ಕ್ರಿಯಾಪದ, ಕ್ರಿಯೆಯು ಧಾತುವಿನ ಅರ್ಥ ಎನ್ನುವಾಗ ಕ್ರಿಯೆ ಎಂದರೇನು ಎಂಬ ಪ್ರಶ್ನೆ ಹುಟ್ಟುತ್ತದೆ. ಕ್ರಿಯೆಯಿಲ್ಲದೆ ಯಾವ ವಸ್ತುವೂ ಸ್ವತಃ ಭೂತವೂ ಅಲ್ಲ, ಭವಿಷ್ಯತ್ತೂ ಅಲ್ಲ, ವರ್ತಮಾನವೂ ಅಲ್ಲ. ಕಾಲ, ಕ್ರಿಯೆ - ಇವುಗಳ ವಿಷಯವಾಗಿ ಪಾಣಿನಿಯ ಸೂತ್ರ, ಕಾತ್ಯಾಯನನ ವಾರ್ತಿಕ, ಪತಂಜಲಿಯ ಮಹಾಭಾಷ್ಯ. ಇವೆಲ್ಲವನ್ನೂ ಅಧ್ಯಯನ ಮಾಡಿ. ಭರ್ತೃಹರಿಯು ವಾಕ್ಯಪದೀಯವೆಂಬ ಗ್ರಂಥವನ್ನು ರಚಿಸಿದ್ದಾನೆ. ಅದರಲ್ಲಿರುವ ಕಾಲ ಸಮುದ್ದೇಶ, ಕ್ರಿಯಾ ಸಮುದ್ದೇಶ ಎಂಬ ಎರಡು ಅಧ್ಯಾಯಗಳ ಅನುವಾದ ಮತ್ತು ವಿವರಣೆ ಇಲ್ಲಿದೆ.
©2024 Book Brahma Private Limited.