ಲೇಖಕ ಜಿ.ಎಸ್. ಶಿವಪ್ರಸಾದ್ ಅವರ ಬಿಡಿ ಬರಹಗಳ ಕೃತಿ ʻಅಪ್ಪ ನೆಟ್ಟ ಆಲದ ಮರʼ. ಘನವ್ಯಕ್ತಿತ್ವದ ತಂದೆಯೊಬ್ಬ ಮಕ್ಕಳನ್ನು ಇಡಿಯಾಗಿ ಆವರಿಸಿ, ಆ ನೆರಳಿನಲ್ಲಿ ಬೆಳೆಯಲು ಅವಕಾಶ ಕೊಡದೆ ಇರುವ ಸಂದರ್ಭಗಳೇ ಹೆಚ್ಚು. ಆದರೆ ಮೂಲತಃ ವ್ಯಕ್ತಿ ಸ್ವಾತಂತ್ರ್ಯವನ್ನು ಅಪಾರವಾಗಿ ಗೌರವಿಸುತ್ತಿದ್ದ ಜಿ.ಎಸ್.ಎಸ್. ಅವರು ಮಕ್ಕಳನ್ನು ಬೆಳೆಸಿದ ಮತ್ತು ಅವರು ಸಹಜವಾಗಿ ಅರಳಿರುವ ಪರಿಯನ್ನು ಈ ಕೃತಿ ಪರಿಣಾಮಕಾರಿಯಾಗಿ ನಿರೂಪಿಸುತ್ತದೆ. ಮಕ್ಕಳನ್ನು ಮುಕ್ತವಾಗಿ ಆದರೆ ಸಾಮಾಜಿಕ ಹೊಣೆಗಾರಿಕೆಯಿಂದ ಮತ್ತು ಆಳವಾದ ನೈತಿಕ ಪ್ರಜ್ಞೆಯಿಂದ ಬೆಳೆಸಿರುವುದನ್ನೂ ಲೇಖಕರು ಪುಸ್ತಕದುದ್ದಕ್ಕೂ ಹೇಳುತ್ತಾ ಹೋಗುತ್ತಾರೆ. ಹೀಗೆ ತಂದೆಯೊಂದಿಗಿನ ಸಂಬಂಧವನ್ನು ಹೇಳುತ್ತಲೇ ಲಂಡನ್ನಿನವರೆಗೂ ಕೃತಿ ಚಾಚಿಕೊಳ್ಳುತ್ತದೆ. ಸಾಂಸ್ಕೃತಿಕ ತಾಕಲಾಟಗಳಿಂದ ಹಿಡಿದು ಸಮಕಾಲೀನ ರಾಜಕಾರಣದ ತನಕ ಇಲ್ಲಿನ ಲೇಖನಗಳ ವ್ಯಾಪ್ತಿಯಿದೆ. ಇಂಗ್ಲೆಂಡಿನ ಹೊಸ ಪ್ರಧಾನಿಯನ್ನು ಕುರಿತ ಲೇಖನವೂ ಇಲ್ಲಿದೆ.
https://www.prajavani.net/artculture/book-review/kannada-literature-alada-mara-book-review-1018602.html - ಪ್ರಜಾವಾಣಿ
©2025 Book Brahma Private Limited.