ಶರಣರ ಆಚಾರ-ವಿಚಾರಗಳ ಅನನ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದ ಹಲವು ಮಠಗಳ ಪೈಕಿ ಧಾರವಾಡದ ಶ್ರೀ ಮುರುಘಾಮಠವು ಪ್ರಮುಖವಾದದ್ದು. ಈ ಮಠಕ್ಕೆ ಸುಮಾರು 250 ವರ್ಷಗಳ ಇತಿಹಾಸವಿದೆ. 1916ರಲ್ಲಿ ಅಧಿಕಾರವಹಿಸಿಕೊಂಡ ಮೃತ್ಯುಂಜಯಪ್ಪವರ ಸಂಕಲ್ಪ ಶಕ್ತಿ ಹಾಗೂ ಮಹಾಂತಪ್ಪನವರ ಕ್ರಿಯಾಶಕ್ತಿ ಸಮ್ಮಿಳಿತವಾಗಿ ಶರಣರ ವೈಚಾರಿಕ ಶಕ್ತಿಕೇಂದ್ರವಾಗಿ ಮುನ್ಕನಡೆಯುತ್ತಾ ಬಂದಿದೆ. ಇಂದಿಗೂ ಆ ಶಕ್ತಿಯ ಅನುಭಾವ ಪಡೆಯಬಹುದು. ‘ ಅಪರಿಮಿತ ಕತ್ತಲೆಯೊಳಗೆ ವಿಪರೀತದ ಬೆಳಕು ’ ಹೆಸರೇ ಸೂಚಿಸುವಂತೆ ಸುಮಾರು 250 ವರ್ಷಗಳ ಹಿಂದೆ ಮೂರ್ತರೂಪ ಪಡೆದಿದೆ. ಈ ಮಠವು ಇಂದು ಶರಣರ ವಿಚಾರ-ಆಚಾರಗಳ ಕೇಂದ್ರವಾಗಿ ಭಕ್ತರ ಜನಮಾನಸವನ್ನು ನಿರ್ದೇಶಿಸುತ್ತಿದೆ. ಮಠ ನಡೆದು ಬಂದ ದಾರಿ ಕುರಿತು ಲೇಖಕ ಭಾಲಚಂದ್ರ ಜಯಶೆಟ್ಟಿ ಅವರು ಸವಿವರವಾಗಿ ಬರೆದಿದ್ದಾರೆ.
©2024 Book Brahma Private Limited.