2009ರಲ್ಲಿ ಲೋಹಿಯಾ ಪ್ರಕಾಶನದ ಮೂಲಕ ಮೊದಲ ಮುದ್ರಣ ಕಂಡ ಅರವಿಂದ ಚೊಕ್ಕಾಡಿಯವರ ‘ಇಲ್ಲದ ತೀರದಲ್ಲಿ’ ಕೃತಿಯು 2021ರಲ್ಲಿ ರೂಪಾ ಪ್ರಕಾಶನದ ಮೂಲಕ ಮರು ಮುದ್ರಣ ಕಂಡಿದೆ.
ತಂದೆಯ ಮರಣಾನಂತರ ತಂದೆಯನ್ನು ಮನೋವೈಜ್ಞಾನಿಕ ನೆಲೆಯಲ್ಲಿ ವಿಮರ್ಶಿಸಿದ ಕೃತಿ ಇದಾಗಿದ್ದು ಅಪ್ಪನ ಬದುಕಿನೊಂದಿಗೆ ಸಂವಾದಕ್ಕೆ ಇಳಿಸುತ್ತದೆ. ಸಾತ್ವಿಕ ಬಂಡಾಯವನ್ನು ಹೋಲುವ ಈ ಕಾದಂಬರಿ ಸಂಬಂಧಗಳ ಪ್ರಖರವಾದ ಕಟು ಸತ್ಯಗಳನ್ನು, ನಾಟಕೀಯತೆಯನ್ನು ತೆರೆದಿಡುತ್ತದೆ. ಲೇಖಕ ಅರವಿಂದ ಚೊಕ್ಕಾಡಿ ಅವರು ತಮ್ಮ ತಂದೆಯೊಂದಿಗಿನ ಒಡನಾಟದ ಸಂಪೂರ್ಣ ಚಿತ್ರಣ ಇಲ್ಲಿದೆ.
©2025 Book Brahma Private Limited.