‘ಶಬರಶಂಕರ ವಿಳಾಸಂ’ ಕೃತಿಯು ದಿಬ್ಬೂರು ಶ್ರೀನಿವಾಸ ರಾವ್ ಅವರ ಗದ್ಯಾನುವಾದ ಕೃತಿಯಾಗಿದೆ. ಷಡಕ್ಷರ ದೇವನ ಅಪರೂಪದ ಕಾವ್ಯವಸ್ತು ಇದಾಗಿದೆ. ವಸ್ತು ಮಹಾಭಾರತದ್ದೇ ಆದರೂ ಪ್ರತಿಪಾದಿಸಿರುವ ರೀತಿ ವಿಭಿನ್ನ. ದಿಬ್ಬೂರು ಶ್ರೀನಿವಾಸರಾಯರು ಮೂಲ ಕಾವ್ಯದ ಸೌಂದರ್ಯ ಕೊಂಚವೂ ಮುಕ್ಕಾಗದ ಹಾಗೆ ಗದ್ಯಾನುವಾದ ಮಾಡಿದ್ದಾರೆ. ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡ ಕೃತಿ ಇದಾಗಿದೆ.
©2025 Book Brahma Private Limited.