ಲೇಖಕ ಬೆ.ಗೋ. ರಮೇಶ್ ಅವರು ಭಾರತದ ಸೇನಾಪಡೆಯ ಬಲದ ಮಾಹಿತಿ ನೀಡಿರುವ ಕೃತಿ -ಭಾರತದ ಸೇನಾಪಡೆ ನಿಮಗೆಷ್ಟು ಗೊತ್ತು?. ಮಕ್ಕಳಿಗಾಗಿ ಬರೆದಿರುವ ಕೃತಿಯ ಭಾಷೆಯೂ ತುಂಬಾ ಸರಳವಾಗಿದೆ. ಮುಂದುವರಿಯುತ್ತಿರುವ ಭಾರತದ ಸೇನಾಪಡೆಯು ಬಲಗೊಳ್ಳುತ್ತಿದೆ. ಅತ್ಯಾಧುನಿಕ ಯುದ್ಧ ವಿಮಾನಗಳನ್ನು, ಯುದ್ದೋಪಕರಣಗಳನ್ನು ಹೆಚ್ಚಿಸಿಕೊಳ್ಳುತ್ತಿದೆ. ಶಾಂತಿ ಪ್ರತಿಪಾದನೆಗಾಗಿ ಯುದ್ಧ ಬಲವನ್ನು ಹೆಚ್ಚಿಸಿಕೊಳ್ಳುತ್ತಿದೆ ವಿನಃ, ಯಾವುದೇ ದೇಶದ ಮೇಲೆ ಯುದ್ಧ ಸಾರಲು ಆ ಮೂಲಕ ಭಾರತದ ಬಲವನ್ನು ತೋರಿಸಲು ಅಲ್ಲ; ಯುದ್ಧ ಒಬ್ಬ ಹೇಡಿಯ ಅಸ್ತ್ರ ಎಂದು ಹೇಳಲಾಗುತ್ತಿದ್ದು, ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು ಹಾಗೂ ದುರ್ಬಲರನ್ನು ರಕ್ಷಿಸಲು ಸೇನಾ ಪಡೆಯು ತನ್ನ ಬಲವನ್ನು ವೃದ್ಧಿಗೊಳಿಸುತ್ತಿದೆ. ಇಂತಹ ಮಾಹಿತಿ ಒಳಗೊಂಡ ಕೃತಿ ಇದು.
©2025 Book Brahma Private Limited.