ಜೀವನ ಶಿಕ್ಷಣ

Author : ಬಿ.ಕೆ. ಬನ್ನಪ್ಪ

Pages 64

₹ 80.00




Year of Publication: 2021
Published by: ಶ್ರೀ ಬನದೇಶ್ವರ ಪ್ರಕಾಶನ
Address: ಸೇಡಂ, ಜಿಲ್ಲೆ ಕಲಬುರಗಿ.

Synopsys

ಲೇಖಕ ಬಿ.ಕೆ. ಬನ್ನಪ್ಪ ಅವರ ಕೃತಿ-ಜೀವನ ಶಿಕ್ಷಣ. ತಾಯಿಯ ಗರ್ಭದಿಂದ ಗೋರಿಯವರೆಗೆ ಅನೇಕ ಹಂತಗಳನ್ನು ದಾಟುವ ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಅಗಣಿತ ಸಮಸ್ಯೆಗಳನ್ನು ಎದುರಿಸುತ್ತಾನೆ. ಸಮಸ್ಯೆಗಳಿಂದ ವಿಮುಖನಾಗುವ ಬದಲು ಅವುಗಳನ್ನು ಸಮಚಿತ್ತದಿಂದ ಎದುರಿಸಿ ಮೆಟ್ಟಿ ನಿಲ್ಲಬೇಕು ಎಂದು ಹೇಳುವುದೇ ಈ ಕೃತಿಯ ಉದ್ದೇಶ. ಔಪಚಾರಿಕ ಶಿಕ್ಷಣಕ್ಕಿಂತ ಅನೌಪಚಾರೀಕರ ಶಿಕ್ಷಣವು ಪ್ರತಿಯೊಬ್ಬ ವ್ಯಕ್ತಿಗೆ ಅವಶ್ಯಕ ಎಂಬುದನ್ನು ಈ ಕೃತಿ ಅಭಿಪ್ರಾಯಪಡುತ್ತದೆ. ಶಿಕ್ಷಣಕ್ಕಿಂತ ಲೋಕ ಶಿಕ್ಷಣದ ಜ್ಞಾನದ ಪ್ರಸ್ತುತತೆಯನ್ನು ಸಮರ್ಥಿಸಿಕೊಳ್ಳುತ್ತದೆ.

About the Author

ಬಿ.ಕೆ. ಬನ್ನಪ್ಪ

ಬಿ.ಕೆ. ಬನ್ನಪ್ಪ ಅವರು ಯಾದಗಿರಿ ಜಿಲ್ಲೆಯ ಮಾಧ್ವರ ಗ್ರಾಮದವರು. ಗ್ರಂಥಪಾಲಕರಾಗಿ ನಿವೃತ್ತರು.  ಕೃತಿಗಳು: ಐಎಎಸ್ ಅಧಿಕಾರಿ ಡಿ.ಕೆ ರವಿ, ಉತ್ತಮ ರಾಜಕಾರಣಿ ಯಾಗಬೇಕಾದರೆ...,,ಅರ್ಥ ಮಾಡಿಕೊಳ್ಳದ ಜೀವನ ವ್ಯರ್ಥ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಹೇಗೆ?,ಭ್ರಷ್ಟಾಚಾರ ಭ್ರಷ್ಟಾಚಾರ.., ಸಮರ್ಥ ಮತ್ತು ಮಾದರಿ ನಾಯಕ ನರೇಂದ್ರ ಮೋದಿ, ಮೋದಿ ಅಲೆ ಏಕೆ, ಜೀವನ ಶಿಕ್ಷಣ ಹಾಗೂ ನೈತಿಕ ಶಿಕ್ಷಣ -ಹೀಗೆ ಒಂಬತ್ತು ಕೃತಿಗಳನ್ನು ಸಮರ್ಪಿಸಿದ್ದಾರೆ. ಪ್ರಶಸ್ತಿ-ಪುರಸ್ಕೃತರು: 1981 ರ ಜನಗಣತಿ ಕಾರ್ಯದಲ್ಲಿ ಸಲ್ಲಿಸಿದ ಉತ್ತಮ ಸೇವೆಗಾಗಿ ರಾಷ್ಟ್ರಪತಿ ಪದಕ, ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಶಸ್ತಿ,ಸೇಡಂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕನ್ನಡ ...

READ MORE

Related Books