‘ಒಂದು ಚಂದ್ರನ ತುಂಡುಗಳು’ ಕೃತಿಯು ಸಣ್ಣ ಬರಹಗಳ ಸಂಕಲನವಾಗಿದೆ. ಇಲ್ಲಿನ ಹೆಜ್ಜೆ ಹೆಜ್ಜೆಗೆ ಕನಸು ಬರಹ ರಮ್ಯ ರೋಚಕ ಕನಸಿನೊಂದಿಗೆ ಪ್ರಾರಂಭವಾಗುತ್ತದೆ. ನಂತರದಲ್ಲಿ ಕನಸಿನ ಕುರಿತ ಕಥೆಗಳು, ನಂಬಿಕೆಗಳು, ವಿಶ್ಲೇಷಣೆಗಳೊಂದಿಗೆ ‘ಕನಸಿನ ಲೋಕ’ ವಿಸ್ತರಿಸುತ್ತದೆ. ಈ ಲೋಕ ಬಾಲಕಿಯೊಬ್ಬಳ ಮಾನಸ ಸರೋವರದಲ್ಲಿ ಮೂಡಿದ ಕಾಮನಬಿಲ್ಲು ಮಾತ್ರವಲ್ಲ; ಅದು ಕನಸು ನೆಪದಲ್ಲಿ ಬಾಲಕಿಯೊಬ್ಬಳು ವರ್ತಮಾನಕ್ಕೆ ಸ್ಪಂದಿಸುವ ರೀತಿ ಹಾಗೂ ತನ್ನ ಸುತ್ತಲಿನ ಪರಿಸರವನ್ನು ಅರ್ಥ ಮಾಡಿಕೊಳ್ಳುವ ಬಗೆ ಇಲ್ಲಿ ವಿಶ್ಲೇಷಿತವಾಗಿದೆ. ಒಂದು ಲಲಿತ ಪ್ರಬಂಧದಂತೆ ಓದಿಸಿಕೊಂಡು ಹೋಗುವ ಈ ಬರಹ ಪುಟ್ಟ ಲೇಖಕಿಯ ಬರವಣಿಗೆಯ ಕಸುಬುದಾರಿಕೆ ಹಾಗೂ ಕಥನ ಕಲೆಗೆ ಉದಾಹರಣೆಯಂತಿದೆ.
©2024 Book Brahma Private Limited.