ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತ ಅವರ ಜೀವನ ಚರಿತ್ರೆಯನ್ನು ಲೇಖಕಿ ಮಾಲಿನಿ ಮಲ್ಯ ಅವರು ಬರೆದ ಕೃತಿ-ಬಾಳಿಗೊಂದು ಉತ್ತರ. ಕಾರಂತರ ಬದುಕು ಒಂದು ವಿಸ್ಮಯವೇ ಸರಿ. ಒಬ್ಬ ವ್ಯಕ್ತಿಯಾಗಿ ಸಾಹಿತ್ಯ, ಕಲೆ, ವಿಜ್ಞಾನ, ಇತಿಹಾಸ, ಪ್ರಾಣಿಶಾಸ್ತ್ರ, ಪಕ್ಷಿಶಾಸ್ತ್ರ, ಸಸ್ಯಶಾಸ್ತ್ರ ಹೀಗೆ ಹತ್ತ್ತು ಹಲವು ಜ್ಞಾನ ಶಾಖೆಗಳನ್ನು ತಿಳಿದು, ಆ ಕುರಿತು ಸಃಇತ್ಯ ರಚಿಸಿದ್ದು ಊಹೆಗೂ ನಿಲುಕದು. ಜಾನಪದೀಯವಾಗಿ ತೀರಾ ಆಸಕ್ತಿ ಹೊಂದಿದ್ದ ಕಾರಂತರು ತಮ್ಮ ಇಳಿವಯಸ್ಸಿನಲ್ಲೂ ಯಕ್ಷಗಾನ -ಬಯಲಾಟದ ಕುಣಿತಗಳನ್ನು ಸಂಭ್ರಮಿಸುತ್ತಿದ್ದರು. ಇಂತಹ ಅಸಾಧಾರಣ ವ್ಯಕ್ತಿತ್ವದ ಕುರಿತು ಲೇಖಕಿಯರು ತಮ್ಮದೇ ರೀತಿಯಲ್ಲಿ ಚಿತ್ರಿಸಿದ್ದು ಈ ಕೃತಿಯ ವೈಶಿಷ್ಟ್ಯ.
©2024 Book Brahma Private Limited.