ಲೇಖಕ ವಿ.ಎಸ್. ಶ್ಯಾನಭಾಗ್ ಅವರು ಕಳೆದ ಎರಡು ದಶಕಗಳಿಂದ ಮುಂಬೈನಲ್ಲಿ ವಾಸಿಸುತ್ತಿದ್ದು, ಮಾಯಾನಗರಿಯ ಮಾಯಾಲೋಕವನ್ನು ಇಲ್ಲಿ ವಿವರಿಸಿದ್ದಾರೆ. ಮುಂಬೈಯನ್ನು ಒಬ್ಬ ವ್ಯಕ್ತಿಯಾಗಿ ಕಂಡು ಆತನಲ್ಲಿಯ ಹರ್ಷ, ಸಂತಸ, ನೋವು, ನಿರಾಶೆ-ಬೇಸರಗಳನ್ನು ದಾಖಲಿಸುತ್ತಾರೆ. ತೀರಾ ಸರಳ ಭಾಷೆಯಲ್ಲಿಯ ಈ ಬರೆಹವು ಮುಂಬೈ ಇತಿಹಾಸವನ್ನೂ ನೆನಪಿಸುತ್ತದೆ. ಮುಂಬೈಯ ಸ್ಥಳೀಯ ಭಾಷೆಯನ್ನೂ ಕಟ್ಟಿಕೊಟ್ಟಿದ್ದಾರೆ. ಲೇಖಕರ ಮುಂಬೈ ಜೀವನ ಪಯಣದ ಚಿತ್ರಣವೂ ಈ ಕೃತಿಯಲ್ಲಿದ್ದು, ಆಕರ್ಷಕ ಶೈಲಿಯು ಓದುಗರ ಗಮನ ಸೆಳೆಯುತ್ತದೆ.
©2024 Book Brahma Private Limited.