ಹಿಂದು ಧರ್ಮ: ಹಿಂದು-ಇಂದು

Author : ಎಂ.ವಿ. ನಾಡಕರ್ಣಿ

Pages 242

₹ 250.00




Year of Publication: 2020
Published by: ಮನೋಹರ ಗ್ರಂಥ ಮಾಲಾ
Address: ಸುಭಾಶ ಬೀದಿ, ಧಾರವಾಡ

Synopsys

`ಹಿಂದು ಧರ್ಮ: ಹಿಂದು-ಇಂದು' ಎಂಬುದು ಹಿರಿಯ ಲೇಖಕ ಪ್ರೊ. ಎಂ.ವಿ. ನಾಡಕರ್ಣಿ ಅವರ ಕೃತಿ. ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ಎಂಬುದು ಹಾಸುಹೊಕ್ಕಾಗಿರುವ ಧರ್ಮದ ಕಲ್ಪನೆಯಾಗಿದೆ. ಭಾರತವು ಧರ್ಮ ವೈವಿಧ್ಯತೆಯ ಸಂಗಮದಂತಿದ್ದರೂ, ‘ಹಿಂದು’ ಎಂಬ ಒಂದು ಪದದಿಂದ ಸಾಮರಸ್ಯವನ್ನು ಕಟ್ಟಿಕೊಡುವಂತಿದೆ. ಹಿಂದು ಎಂಬ ಪರಿಕಲ್ಪನೆಗೆ ಶ್ರೀಮಂತ ಇತಿಹಾಸವೂ ಇದೆ. ಆದರೆ, ಇಂದಿನ ಯುವಪೀಳಿಗೆಯು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಹಿಂದೂ ಧರ್ಮವನ್ನು ನಿರ್ಲಕ್ಷಿಸಿ ಮಾತನಾಡುವ ಪ್ರವೃತ್ತಿಅನುಸರಿಸುತ್ತಿದೆ. ಇದಕ್ಕೆ ಸೂಕ್ತ ಉತ್ತರವಾಗಿ ಲೇಖಕರು, ‘ಹಿಂದು ಧರ್ಮ’ದ ನೈಜ ಸ್ವರೂಪ-ಸ್ವಭಾವವನ್ನು ತೋರಿದ್ದು, ಈ ನಿಟ್ಟಿನಲ್ಲಿ ಹಿಂದು ಧರ್ಮವನ್ನು ಸ್ವೀಕರಿಸುವ ಆಶಯ ಈ ಕೃತಿಯ ಹಿಂದೆ ಇದೆ.

About the Author

ಎಂ.ವಿ. ನಾಡಕರ್ಣಿ

ಹಿರಿಯ ಲೇಖಕ ಪ್ರೊ. ಎಂ.ವಿ. ನಾಡಕರ್ಣಿ (ಮಂಗೇಶ ವೆಂಕಟೇಶ ನಾಡಕರ್ಣಿ-1933-2007) ಅವರು ಉತ್ತರಕನ್ನಡ ಜಿಲ್ಲೆಯವರು. ಹೈದ್ರಾಬಾದ ಹಾಗೂ ಸಿಂಗಾಪುರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಭಾಷಾ ಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದ್ದು, ಶ್ರೀ ಅರವಿಂದರ ಜೀವನದಿಂದ ಪ್ರಭಾವಿತರಾದವರು. ಪಾಂಡಿಚೇರಿಯ ಶ್ರೀ ಅರವಿಂದ ಆಶ್ರಮದಲ್ಲಿ (1995ರ ನಂತರ) ಅರವಿಂದರ ಮಹಾಕೃತಿ-ಸಾವಿತ್ರಿ ಕುರಿತು ಪ್ರವಚನ ಹೇಳುತ್ತಿದ್ದರು. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಕರಾಗಿದ್ದರು. ಕೃತಿಗಳು: ಶ್ರೀ ಅರಬಿಂದೊ, ದಿ. ಮದರ್, ಹಿಂದು ಧರ್ಮ: ಹಿಂದು-ಇಂದು, ...

READ MORE

Related Books