ಕನ್ನಡ ಚಲನಚಿತ್ರರಂಗದ ನಿರ್ದೇಶಕರಾದ ಎಸ್.ವಿ ರಾಜೇಂದ್ರಸಿಂಗ್ ಬಾಬು ಅವರು ಬರೆದಿರುವ ಪುಸ್ತಕ ’ನೆನಪಿನ ಮುತ್ತಿನಹಾರ’.
ಈ ಪುಸ್ತಕವು ಕನ್ನಡ ಚಿತ್ರರಂಗದ ಧೀಮಂತ ಮೇರುನಟ ಡಾ. ವಿಷ್ಣುವರ್ಧನ್ ಅವರ ಬಗೆಗಿನ ನೆನಪುಗಳನ್ನು ಈ ಕೃತಿ ಬಿತ್ತರಿಸಿದೆ.
ಸ್ನೇಹದ ಮೊದಲ ದಿನಗಳು, ಮೇಕಪ್ ಟೆಸ್ಟ್ ನಲ್ಲಿ ಗೆದ್ದ ವಿಷ್ಣು, ಸುತ್ತಾಟ ತಂದ ಪೀಕಲಾಟ, ಜನಪ್ರಿಯ ಹಾಡಿನ ಸಾಲೇ ಮುಳುವಾದಾಗ, ಕಾಲ್ ಷೀಟ್ ಹಾಗೂ ಕಾರಿನ ಪ್ರಯಾಣ, ಏರ್ ಗನ್ ಚೇಷ್ಟೆ, ಮುತ್ತತ್ತಿಯಲ್ಲಿ ಆನೆಗಳ ಮುತ್ತಿಗೆ, ಕೂಗಾಡಿ ಕಷ್ಟಕ್ಕೆ ಸಿಲುಕಿದ್ದು, ಎಂ.ಜಿ.ಆರ್, ವಿಷ್ಣುವಿನಿಂದ ಸಾಧ್ಯವಾದ ನಾಗರಹೊಳೆ, ವಿಷ್ಣು ಮದುವೆಯಲ್ಲಿ ನಾವು, ಎಳನೀರು ಬುರುಡೆಯಲ್ಲಿ ಟೀ, ರವಿ ಕಥೆಗೆ ವಿಷ್ಣುವನ್ನು ನಾಯಕ ಮಾಡಲು ಹೆಣಗಾಡಿದ್ದು, ಕುದುರೆ ಲಾಯದಲ್ಲಿ ಕೂಲಿ ವಿಷ್ಣು, ವಿಷ್ಣು ನಕಾರ, ಶಂಕರ್ ಸ್ವೀಕಾರ, ನಗೆ ಉಕ್ಕಿಸಿದ ಟ.ಎನ್.ಆರ್ ಇಂಗ್ಲಿಷ್, ಗೋವಾದಲ್ಲಿ ಕ್ಯಾಬರೆ ಮೋಹ, ನಾನು ಕಂಡ ಕಳ್ಳ ಕುಳ್ಳ, ಮಾನಸ ಸರೋವರವೂ ಜಾತಕ ಪ್ರೀತಿಯೂ, ನನಸಾಗದ ಹಗಲುಗನಸು, ಮುತ್ತಿನಹಾರದ ಕಥನ ಕುತೂಹಲ, ಮಡಿಕೇರಿಯಲ್ಲಿ ಸಿಕ್ಕ ಹಾಡು, ಶಮ್ಮಿ ಕಪೂರ್ ಗೆ ವಿಷ್ಣು ಆತಿಥ್ಯ, ಹೀಗೆ ಅನೇಕ ಲೇಖನಗಳು ಕನ್ನಡ ಚಿತ್ರರಂಗದಲ್ಲಿ ಮೆರೆದ, ನೆನಪಿಸಿದ ವಿಷ್ಣುವರ್ಧನ್ ಜೊತೆಗಿನ ದಿನಗಳನ್ನು ಇಲ್ಲಿ ಚಿತ್ರಿಸಿದ್ದಾರೆ.
©2024 Book Brahma Private Limited.