ಹಿರಿಯ ವೃತ್ತಿಪರ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರ ಸಿನಿಮಾ ಜರ್ನೀ "ಚಿತ್ರಪಥ". ಸುಮಾರು ನಲವತ್ತು ವರ್ಷಗಳ ವೃತ್ತಿ ಬದುಕಿನಲ್ಲಿ ಅಶ್ವತ್ಥರು ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ಸ್ಟಿಲ್‌ಗಳಲ್ಲದೆ ಕಲಾವಿದರು ಹಾಗೂ ತಂತ್ರಜ್ಞರ ಅಪರೂಪದ ಫೋಟೋಗಳು ಅವರ ಸಂಗ್ರಹದಲ್ಲಿವೆ. ಕನ್ನಡ ಚಿತ್ರರಂಗದ ಇತಿಹಾಸದ ಭಾಗವಾಗಿರುವ ನಾಲ್ಕುನೂರಕ್ಕೂ ಹೆಚ್ಚು ಆಯ್ದ ಅಪರೂಪದ ಫೋಟೋಗಳು ಮತ್ತು ಅಶ್ವತ್ಥರ ಅನುಭವಗಳ ಟಿಪ್ಪಣಿಗಳು ಈ ಕಾಫಿ ಟೇಬಲ್ ಪುಸ್ತಕದಲ್ಲಿವೆ.
©2025 Book Brahma Private Limited.