ಕನ್ನಡ ಚಲನಚಿತ್ರ ನಟ ಪುನೀತ್ ರಾಜಕುಮಾರ ಅವರ ಜೀವನ ಕಥನ-ನೀನೇ ರಾಜಕುಮಾರ. ಲೇಕಕ ಶರಣು ಹುಲ್ಲೂರು ಅವರು ರಚಿಸಿದ್ದಾರೆ. ಪುನೀತ್ ರಾಜಕುಮಾರ ಅವರು ಬಾಲ್ಯದಿಂದಲೇ ಅಂದರೆ ತಮ್ಮ ತಂದೆ ರಾಜಕುಮಾರ ಅವರು ಚಲನಚಿತ್ರಗಳಲ್ಲಿ ನಟಿಸುತ್ತಿರುವಾಗಲೇ ನಟನೆಗೆ ಇಳಿದವರು. ತಂದೆಯ ಮಾರ್ಗದರ್ಶನದಲ್ಲಿ ಪಳಗಿದವರು. ಚಲನಚಿತ್ರಗಳ ಬೇರೆ ಬೇರೆ ಆಯಾಮಗಳನ್ನು ಬಾಲ್ಯದಿಂದಲೇ ಕಂಡವರು. ಹೀಗಾಗಿ, ನಟನೆಯಲ್ಲಿ ತಮ್ಮದೇ ಛಾಪು ಮೂಡಿಸಿ, ಪ್ರೇಕ್ಷಕರ ವರ್ಗವನ್ನು ಸೃಷ್ಟಿಸಿಕೊಂಡಿದ್ದು, ಆಕಸ್ಮಾತ್ ಹೃದಯಾಘಾತದಿಂದ ಮೃತಪಟ್ಟರು. ಸಣ್ಣ ವಯಸ್ಸಿನಿಂದಲೇ ಕೀರ್ತಿ ಶಿಖರವೇರುತ್ತಿರುವ ಸಾಹಸ ಹೆಜ್ಜೆಗಳನ್ನು ಮೂಡಿಸಿದ್ದ ಪುನೀತ್ ರಾಜಕುಮಾರ ಅವರಿಗೆ ಮತ್ತಷ್ಟು ಉಜ್ವಲ ಭವಿಷ್ಯ ಇತ್ತು. ಈ ಮಧ್ಯೆಯೇ ಅವರು ಅಕಾಲಿಕ ಮರಣವನ್ನಪ್ಪಿದರು. ತಮ್ಮ ನಟನೆಯ ಜೊತೆಗೆ ಅನಾಥ ಮಕ್ಕಳ ನೆರವಿಗೆ ಬಂದು ಅನ್ನದಾಸೋಹ ಸೇವೆಯನ್ನು ಕೈಗೊಂಡಿದ್ದರು. ಹೀಗಾಗಿ, ನಟನೆ, ಸೇವೆ, ಕನ್ನಡ ಪರ ಹೋರಾಟಗಳಲ್ಲಿ ಪಾಲ್ಗೊಂಡು ಕನ್ನಡತನವನ್ನು ಮೆರೆದಿದ್ದ ಪುನೀತ್ ಅವರ ಸಾವು ಕನ್ನಡಿಗರ ನೆನಪಿನಲ್ಲಿ ಅಚ್ಚಳಿಯದೇ ಉಳಿಯುವ ವ್ಯಕ್ತಿತ್ವ. ಇಂತಹ ಸೇವೆಗಳನ್ನು ಕಟ್ಟಿಕೊಟ್ಟ ಕೃತಿ ಇದು.
ಕೃತಿಕಾರರು ಹೇಳುವಂತೆ ‘ಪುನೀತ್ ರಾಜ್ ಕುಮಾರ್ ಕುರಿತಾಗಿ ಬರುತ್ತಿರುವ ಮೊದಲ ಬಯೋಗ್ರಫಿ ಇದಾಗಿದೆ. ಹಾಗಂತ ಬರೀ ಇದರಲ್ಲಿ ಪುನೀತ್ ಜೀವನ ಕುರಿತಾದ ವಿಷಯಗಳು ಮಾತ್ರವಿಲ್ಲ. ಅವರ ಬದುಕನ್ನು ಓದುತ್ತಾ, ಅದರೊಂದಿಗೆ ಸಿನಿಮಾ ಇತಿಹಾಸವನ್ನು ಓದಿಸಿಕೊಂಡು ಹೋಗುವಂತ ಗುಣವನ್ನು ಹೊಂದಿದೆ. ಅವರ ವೃತ್ತಿ ಮತ್ತು ಖಾಸಗಿ ಜೀವನ ಕುರಿತಾದ ಅಪರೂಪದ ವಿಷಯಗಳನ್ನು ಮತ್ತು ಛಾಯಾಚಿತ್ರಗಳನ್ನು ಈ ಪುಸ್ತಕ ಒಳಗೊಂಡಿದೆ. ಬಾಲ್ಯ, ಬಾಲ್ಯದಲ್ಲಿ ನಟಿಸಿದ ಸಿನಿಮಾಗಳು ಮತ್ತು ಅರಸು ಚಿತ್ರದಿಂದ ಜೇಮ್ಸ್ ಚಿತ್ರದವರೆಗಿನ ಸಮಗ್ರ ನೋಟ ಇಲ್ಲಿದೆ. ಅವರ ಖಾಸಗಿ ಬದುಕಿನ ಅನೇಕ ಸಂಗತಿಗಳನ್ನು ಈ ಪುಸ್ತಕದಲ್ಲಿವೆ. ಒಟ್ಟು 34 ಅಧ್ಯಾಯಗಳಿವೆ’ ಎನ್ನುತ್ತಾರೆ.
©2024 Book Brahma Private Limited.