ಡಾ. ರಾಜಕುಮಾರ್ ದಂತಕಥೆ

Author : ಜಗನ್ನಾಥರಾವ್ ಬಹುಳೆ

Pages 280

₹ 120.00




Year of Publication: 2010
Published by: ಸಿನಿಮಾ ಸಾಹಿತ್ಯ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಎಸ್. ಜಗನ್ನಾಥರಾವ್ ಬಹುಳೆ ಅವರ ಬರೆದಿರುವ ಕೃತಿ-ಡಾ. ರಾಜಕುಮಾರ್ ದಂತಕಥೆ. ಕನ್ನಡ ಚಲನಚಿತ್ರ ನಟ ಡಾ. ರಾಜ್ ಅವರು ತಮ್ಮ ನಟನೆ ಮಾತ್ರವಲ್ಲ ಹಾಡುಗಳ ಮೂಲಕವೂ ತಮ್ಮದೇ ಛಾಪು ಮೂಡಿಸಿದ್ದಾರೆ. ಯಾವುದೇ ಪಾತ್ರವಾದರೂ ಸೈ, ಅದು ಐತಿಹಾಸಿಕ, ಪೌರಾಣಿಕ ಇಲ್ಲವೇ ಸಾಮಾಜಿಕ ಪಾತ್ರವಾದರೂ ಅತ್ಯಂತ ಪರಿಣಾಮಕಾರಿಯಾಗಿ ನಟಿಸಿ ಆ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ. ನಟನೆ, ಭಾಷೆಯ ಸ್ಪಷ್ಟತೆ, ಆ ನಟನೆಯ ಮೂಲಕವೇ ತಾವು ನಂಬಿದ ಸಿದ್ಧಾಂತದ ಪ್ರತಿಪಾದನೆ, ಸಂಸ್ಕೃತಿಯ ಒಲವು ಎಲ್ಲವನ್ನೂ ತೋರುವ ಮೂಲಕ ಒಂದು ಮಾದರಿ ವ್ಯಕ್ತಿತ್ವವನ್ನು ಮುಂದಿಡುವ ಎಲ್ಲ ಸಾಧ್ಯತೆಗಳ ಮೊತ್ತವಾಗಿ ಡಾ. ರಾಜ್ ವ್ಯಕ್ತಿತ್ವ ಇದೆ. ಆದ್ದರಿಂದ, ಲೇಖಕರು ಡಾ. ರಾಜ್ ಅವರನ್ನು ‘ದಂತಕತೆ’ ಎಂದು ಅಭಿಪ್ರಾಯಪಟ್ಟಿದ್ದು, ಅತಿಶಯೋಕ್ತಿಯಲ್ಲ. ಇಂತಹ ವ್ಯಕ್ತಿತ್ವವನ್ನು ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ.

About the Author

ಜಗನ್ನಾಥರಾವ್ ಬಹುಳೆ

ಜಗನ್ನಾಥರಾವ್ ಬಹುಳೆ ಅವರು ರಾಜ್‌ಕುಮಾರ್‌ರ ಆಪ್ತ. ಅಭಿಮಾನಿಗಳು ಹೌದು. ಕನ್ನಡಿಗರ ಕಣ್ಮಣಿ ರಾಜ್‌ಕುಮಾರ್‌ ಅವರ ಕುರಿತೇ 13ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ. ಇವರು ಹುಟ್ಟಿದ್ದು ಬೆಂಗಳೂರಿನ ಆನೇಕಲ್‌ನಲ್ಲಿ. ಸಿನಿಮಾ-ಸಾಹಿತ್ಯ-ಸಂಸ್ಕೃತಿ ಕುರಿತ ಅವರ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ರಾಜಾಯಣ, ಬೆಳ್ಳಿತೆರೆಯ ಬಂಗಾರದ ಮಹಿಳೆ, ರಾಜ್‌ಕುಮಾರ್‌ ನಡೆದ ಹಾದಿಯಲ್ಲಿ, ರಾಜ್‌ಕುಮಾರ್‌ ವಿಚಾರಧಾರೆ, ರಾಜ್ ನೀತಿ, ಅಣ್ಣಾವ್ರ ಅಮರಗೀತೆಗಳು, ಕುಮಾರತ್ರಯರು, ಮುತ್ತುರಾಜರ ಮುತ್ತಿನ ಮಾತುಗಳು’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books