ಲೇಖಕ ಸಿರಿಗೇರಿ ಯರಿಸ್ವಾಮಿ ಅವರ ಸಂಪಾದಿತ ಕೃತಿ-ಸ್ವರ ಗಂಧರ್ವ. ಕನ್ನಡ ಚಲನಚಿತ್ರ ರಂಗದ ಹೆಸರಾಂತ ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಗಾಯನದ ಸಾಧನೆಗಳನ್ನು ಕೇಂದ್ರವಾಗಿಟ್ಟುಕೊಂಡು ರಚಿಸಿದ ಕೃತಿ ಇದು. ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ ಅವರು ‘ಎಸ್ ಪಿಬಿ’ ಎಂದೇ ಖ್ಯಾತಿ. ತೆಲುಗು ಹಾಗೂ ತಮಿಳುನಾಡು ಚಲನಚಿತ್ರರಂಗಗಳಲ್ಲೂ ಅಸಂಖ್ಯ ಗೀತೆಗಳನ್ನು ಹಾಡಿದ್ದ, ಅದ್ವಿತೀಯರು. ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಧ್ವನಿದಾನ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆಯಲ್ಲೂ ತಮ್ಮದೇ ಛಾಪೂ ಮೂಡಿಸಿದವರು. ಆಂಧ್ರಪ್ರದೇಶ ಚಿತ್ತೂರಿನ ಕೊನೇಟಮ್ಮಪೇಟಾ ಗ್ರಾಮದ ಸಂಪ್ರದಾಯಸ್ಥ ಮನೆತನದವರು. ವ್ಯವಸ್ಥಿತವಾಗಿ ಸಂಗೀತ ಕಲಿಯದಿದ್ದರೂ ಗಾಯನದಲ್ಲಿ ಅದ್ಭುತ ಸಾಧನೆ ಮಾಡಿದವರು. ಇಂತಹ ಸಾಧನೆಗಳ ಆಯಾಮಗಳನ್ನು ಪರಿಚಯಿಸುವ ಬರಹಗಳನ್ನು ಸಂಪಾದಿಸಲಾಗಿದೆ.
©2025 Book Brahma Private Limited.