ನಟ ಡಾ. ವಿಷ್ಣುವರ್ಧನ್ ಅವರ ಬದುಕಿನಲ್ಲಿ ಮಾತ್ರವಲ್ಲ; ಕನ್ನಡ ಚಲನಚಿತ್ರ ರಂಗದಲ್ಲಿ ನಾಗರಹಾವು ಸಿನಿಮಾ ಗುರುತರ ಹೆಜ್ಜೆ ಮೂಡಿಸಿದೆ. 29-12-1972ರಲ್ಲಿ ತೆರೆ ಕಂಡ ಈ ಸಿನಿಮಾ 29-12-2012ಕ್ಕೆ 40 ವರ್ಷಗಳು ಸಂದ ಪ್ರಯುಕ್ತ ಲೇಖಕ ಜನಾರ್ದನರಾವ್ ಸಾಳಂಕೆ ಅವರ ‘ನಾಗರಹಾವು’ ಕೃತಿ ಬಿಡುಗಡೆ ಕಂಡಿದೆ. ಕನ್ನಡ ಸಿನಿಮಾ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಸಿನಿಮಾ ಒಂದು ಅಮರ ಪ್ರೇಮ ಕಾವ್ಯ ಎಂದೇ ಪರಿಗಣಿಸಲಾಗುತ್ತದೆ. ಕೃತಿಗೆ ಬೆನ್ನುಡಿ ಬರೆದ ಡಾ. ಸಿ.ಎಸ್. ಅಶ್ವತ್ಥ ‘ಜಗತ್ತಿನಲ್ಲಿ ತನಗೆ ಎಷ್ಟೇ ದುಃಖ ಆದ್ರೂ, ಏನೇ ಕಷ್ಟ ಬಂದ್ರೂ, ಇತರರ ಸುಖಕ್ಕೋಸ್ಕರವಾಗಿ ತನ್ನ ಭಾಳನ್ನ ತ್ಯಾಗ ಮಾಡೊವ್ನೆ ದೊಡ್ಡ ವ್ಯಕ್ತಿ. ಮಹಾನ್ ವ್ಯಕ್ತಿ ಅಂತಹ ವ್ಯಕ್ತಿ ನನ್ ರಾಮಾಚಾರಿ (ವಿಷ್ಣುವರ್ಧನ್ )’ ಎಂದು ಪ್ರಶಂಸಿಸಿದ್ದಾರೆ. ನಾಗರಹಾವು ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಘಟನೆಗಳನ್ನು ಇಲ್ಲಿ ದಾಖಲಿಸಲಾಗಿದೆ.
©2025 Book Brahma Private Limited.