ಅಂಬರೀಶ್‌

Author : ಶರಣು ಹುಲ್ಲೂರು

Pages 164

₹ 150.00




Year of Publication: 2018
Published by: ಸಾವಣ್ಣ ಎಂಟರ್ ಪ್ರೈಸಸ್
Address: #57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ ಬೆಂಗಳೂರು-560004
Phone: 9845224979

Synopsys

ಅಮರನಾಥ್‌ ಯಾನೆ ಅಂಬರೀಷ್‌ ಕನ್ನಡ ಚಿತ್ರರಂಗದ ವಿಭಿನ್ನ ನಟರು. ಖಳನಟನಾಗಿ ಚಿತ್ರರಂಗ ಪ್ರವೇಶಿಸಿದ ಅವರು ನಾಯಕನಟನಾಗಿ ಮಿಂಚಿದವರು. ರಾಜಕಾರಣದಲ್ಲೂ ಭಿನ್ನವಾಗಿ ನೆಲೆ ನಿಂತವರು. 

ಅವರ ವ್ಯಕ್ತಿ- ವ್ಯಕ್ತಿತ್ವ ಹಾಗೂ ವರ್ಣರಂಜಿತ ಬದುಕನ್ನು ತೆರೆದಿಡುವ ಕೃತಿಯನ್ನು ಡಾ. ಶರಣು ಹುಲ್ಲೂರು ರಚಿಸಿದ್ದಾರೆ. ಇದು ಅಂಬರೀಷ್‌ ಅವರು ಹುಟ್ಟಿದ ವಿಸ್ಮಯ ಗಳಿಗೆಯಿಂದ ಅಂತ್ಯದವರೆಗಿನ ಪ್ರಮುಖ ಅಂಶಗಳನ್ನು ಸ್ವಾರಸ್ಯಕರವಾಗಿ ಚಿತ್ರಿಸುತ್ತದೆ. ಆ ಕಾರಣ ಅವರ ವಿಶಿಷ್ಟ ಜೀವನಚರಿತ್ರೆಯಾಗಿ ಕೃತಿ ಮೈದಳೆದಿದೆ. 

ಲಿಕ್ಕರ್‌ ಅಂಗಡಿ ತೆರೆಯಬೇಕೆಂದಿದ್ದವರು, ಸೆಲ್ಯುಲಾಯ್ಡ್‌ ಜಗತ್ತಿಗೆ ಪ್ರವೇಶಿಸಿದ್ದು, ನಾಗರಹಾವಿನ ನೆಚ್ಚಿನ ಜಲೀಲನಾಗಿದ್ದು, ಡಾ. ರಾಜ್‌ ಮತ್ತು ಡಾ. ವಿಷ್ಣು ಅವರ ಕೊಂಡಿಯಾಗಿದ್ದು ಇತ್ಯಾದಿ ಅನೇಕ ಅಂಶಗಳನ್ನು ಕೃತಿ ಚರ್ಚಿಸುತ್ತದೆ. ಚಿತ್ರರಂಗದ ಟ್ರಬಲ್‌ ಶೂಟರ್‌ ರೇಸ್‌ ಹುಚ್ಚನಾಗಿದ್ದುದನ್ನೂ ಪುಸ್ತಕ ನೆನಪಿಸುತ್ತದೆ. 

About the Author

ಶರಣು ಹುಲ್ಲೂರು

ವೃತ್ತಿಯಿಂದ ಪತ್ರಕರ್ತರಾಗಿರುವ ಡಾ. ಶರಣು ಹುಲ್ಲೂರು ಹುಟ್ಟಿದ್ದು ಗದಗ ಜಿಲ್ಲೆ ರೋಣ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿರುವ ಅವರು ವಿಜಯ ಕರ್ನಾಟಕ ಪತ್ರಿಕಾ ಬಳಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  'ತಪ್ಪು ಮಾಡಿದ ತಾತ', 'ಮುಂದಿರುವ ಮೌನ', 'ಜುಗಲ್ಬಂದಿ' ಎಂಬ ಕವನ ಸಂಕಲನಗಳನ್ನು, ’ಚಂದನ ಸಿಂಚನ’ ಎಂಬ ಬಿ.ಜೆ.ಅಣ್ಣಿಗೇರಿ ಅವರ ಜೀವನ ಚರಿತ್ರೆಯನ್ನು,  ’ಮಲ್ಲಿಗೆ’, ’ಕನಸಿನ ಹುಡುಗ’ ನಾಟಕವನ್ನು ರಚಿಸಿದ್ದಾರೆ. ತಕಧಿಮಿಕಾ, ಮುಂಗಾರಿನ ಕನಸು ಕಾರ್ತೀಕ ದೀಪ, ಬದುಕು, ಮದರಂಗಿ ಮುಂತಾದ ಧಾರಾವಾಹಿಗಳಿಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಕಾರ್ಯನಿರತ ಪತ್ರಕರ್ತರ ಸಂಘದ 'ಅತ್ಯುತ್ತಮ ...

READ MORE

Related Books