ಸಿನಿ ಬಿಂಬ

Author : ಡಿ.ಎಸ್. ಶ್ರೀನಿವಾಸ್ ಪ್ರಸಾದ್

Pages 372

₹ 400.00




Year of Publication: 2021
Published by: ಸಿನಿಮಾ ಸಾಹಿತ್ಯ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಡಿ.ಎಸ್. ಶ್ರೀನಿವಾಸ ಪ್ರಸಾದ್ ಅವರ ಕೃತಿ-ಸಿನಿ ಬಿಂಬ. ಬಣ್ಣದ ಬದುಕಿನ ದರ್ಶನ ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆಯು ಒಟ್ಟಾರೆ ಕೃತಿಯ ಸ್ವರೂಪ-ಸ್ವಭಾವದ ಸೂಚಕವಾಗಿದೆ. ಸಾಹಿತಿ ಅ.ನಾ. ಪ್ರಹ್ಲಾದರಾವ್ ಅವರು ಕೃತಿಗೆ ಬೆನ್ನುಡಿ ಬರೆದು ‘ಸಿನಿಮಾ ರೋಚಕ ಕ್ಷೇತ್ರವಾದರೂ ನಿಜವಾದ ಸಾಧಕರ ಕೊಡುಗೆ ಮುಂದಿನ ಕಲಾವಿದರಿಗೆ, ತಂತ್ರಜ್ಞರಿಗೆ ಮಾದರಿಯಾಗಿ ಉಳಿಯಬೇಕು. ಈ ಹಿಂದೆ ಪತ್ರಿಕೆಗಳಲ್ಲಿ ಸಿನಿಮಾ ಸಾಧಕರ ಕಥೆ-ವ್ಯಥೆ ದಾಖಲಾಗುತ್ತಿದ್ದವು. ಆದರೆ, ಇಂದಿನ ಪತ್ರಿಕೆಗಳು ಓದುಗರ ಅಭಿರುಚಿಗೆ ತಕ್ಕಂತೆ ರೋಮಾಂಚನಗೊಳಿಸುವತ್ತ ಹೊರಳಿವೆ. ಇಂತಹ ಕಾಲಘಟ್ಟದಲ್ಲಿ ಶ್ರೀನಿವಾಸ ಪ್ರಸಾದ್ ಅವರಂತಹ ಬೌದ್ಧಿಕ ಜೀವಿಗಳೇ ಸಿನಿಮಾ ಸಾಧಕರ ಕರಾರುವಕ್ಕು ಮಾಹಿತಿಗಳನ್ನು ಉಳಿಸಬೇಕಾದ ಅನಿವಾರ್ಯತೆ ಇದೆ. ಆ ಕೆಲಸವನ್ನು ಡಿ.ಎಸ್. ಶ್ರೀನಿವಾಸ ಪ್ರಸಾದ್ ಅವರು ಬಹಳ ಶ್ರಮದಿಂದ, ಶ್ರದ್ಧೆಯಿಂದ ಮಾಡುತ್ತಾ ಬಂದಿದ್ದರ ಫಲವಾಗಿ ಈ ಕೃತಿ’ ಎಂದು ಪ್ರಶಂಸಿಸಿದ್ದಾರೆ.

About the Author

ಡಿ.ಎಸ್. ಶ್ರೀನಿವಾಸ್ ಪ್ರಸಾದ್

ಬೆಂಗಳೂರು ಮೂಲದವರಾದ ಲೇಖಕ ಡಿ.ಎಸ್. ಶ್ರೀನಿವಾಸ ಪ್ರಸಾದ್ ಅವರು ಬಾಲ್ಯದಿಂದಲೇ ಬರೆವಣಿಗೆಯಲ್ಲಿ ತೊಡಗಿಕೊಂಡವರು.ತಮ್ಮ 10ನೇ ವಯಸ್ಸಿನಲ್ಲೇ ಬೆಂಗಳೂರು ಆಕಾಶವಾಣಿಯಲ್ಲಿ ಬಾಲಕಲಾವಿದನಾಗಿ `ಒಗ್ಗಟ್ಟಿನಲ್ಲಿ ಬಲವಿದೆ', `ಸಮುದ್ರದಲ್ಲಿ ಆಹಾರ...' ಸೇರಿದಂತೆ 10 ನಾಟಕಗಳಲ್ಲಿ ಅಭಿನಯಿಸಿದ್ದರು.  ಆಚಾರ್ಯ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಇವರು 3 ವರ್ಷದಲ್ಲಿ ಸುಮಾರು 155 ಅಂತರಕಾಲೇಜು ಬಹುಮಾನಗಳನ್ನು ಪಡೆದು ಪ್ರತಿಭಾವಂತ ವಿದ್ಯಾರ್ಥಿ ಪ್ರಶಸ್ತಿಗೆ ಭಾಜನರಾದರು. ಶೇಷಾದ್ರಿಪುರಂ ಕನ್ನಡ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ.ಎ./ಪದವಿಯನ್ನು ವ್ಯಾಸಂಗ ಮಾಡಿದರು. ಪ್ರಸ್ತುತ ಅವರು ಕನ್ನಡ ಉಪನ್ಯಾಸಕರು.  ಕೃತಿಗಳು: ಸಾಹಿತ್ಯ ಶಿಲ್ಪಿ : ಚಿ ಉದಯಶಂಕರ್ , ಸ್ವರ ರಾಗ ಸುಧಾ : ಸಿನಿಮಾ ಸಂಗೀತದ ಕ್ಲಾಸಿಕಲ್ ಟಚ್.  ...

READ MORE

Related Books