ಸ್ಕ್ರೀನ್ ಶಾಟ್‌

Author : ಚೇತನ್‌ ನಾಡಿಗೇರ್‌

Pages 240

₹ 225.00




Year of Publication: 2019
Published by: ಸ್ನೇಹ ಬುಕ್ ಹೌಸ್‌
Address: #118, ಹೊಂಬೆಳಕು, ಎಚ್.ಎಂ.ಟಿ. ಲೇಔಟ್, ನಾಗಸಂದ್ರ ಅಂಚೆ, ಬೆಂಗಳೂರು-560073
Phone: 9449655053

Synopsys

23 ಚಿತ್ರಗಳನ್ನು ಒಂದೇ ದಿನ ನಿರಾಕರಿಸಿದ ನಟಿ ಯಾರು? ಪ್ರಾರಂಭವಾಗಿ 42 ವರ್ಷಗಳ ನಂತರ ಬಿಡುಗಡೆಯಾದ ಚಿತ್ರ ಯಾವುದು? ಎರಡು ಗಂಟೆ ಚಿತ್ರವನ್ನ ಎರಡು ಗಂಟೆಯಲ್ಲೇ ಶೂಟ್ ಮಾಡಿ ಮುಗಿಸಿದ ಚಿತ್ರ ಯಾವುದು? ಈ ತರಹ ದಾಖಲಾಗದ ಹಲವು ಕುತೂಹಲಕಾರಿ ಮಾಹಿತಿಗಳನ್ನು ದಾಖಲಿಸಿರುವ ಕೃತಿಯೇ ಈ `ಸ್ಕ್ರೀನ್ ಶಾಟ್‌’. ಇದಕ್ಕೆ ರಮೇಶ್‌ ಅರವಿಂದ್‌ ಅವರ ಬೆನ್ನುಡಿ ಇದೆ. 

ಅವರ ಮೊದಲ ಚಿತ್ರವೇ ಕೊನೆಯ ಚಿತ್ರವಾಗಿತ್ತು!

"ಆ ಚಿತ್ರದ ಎರಡ್ಮೂರು ಪತ್ರಿಕಾಗೋಷ್ಠಿಗಳಿಗೆ ಹೋಗಿ, ಚಿತ್ರದ ಬಗ್ಗೆ ಬರೆಯುವ ಅವಕಾಶ ಸಿಕ್ಕಿತ್ತು. ಆ ಕಾಲಕ್ಕೆ ಅದು ಬಹಳ ಸುದ್ದಿಯಾದ ಚಿತ್ರ. ಏಕೆಂದರೆ, ಅದಕ್ಕೂ ಮುನ್ನ ಭಾರತದಲ್ಲಿ ಅತ್ಯಂತ ತಡವಾಗಿ ಬಿಡುಗಡೆಯಾದ ಚಿತ್ರವೆಂದರೆ ಅದು ಕೆ. ಆಸಿಫ್ ನಿರ್ದೇಶನದ `ಲವ್ ಆ್ಯಂಡ್ ಗಾಡ್' ಆಗಿತ್ತು. ಆ ಚಿತ್ರ ಪ್ರಾರಂಭವಾಗಿ 23 ವರ್ಷಗಳ ನಂತರ ಬಿಡುಗಡೆಯಾಗಿತ್ತು ಎಂದು ಹೇಳಲಾಗುತ್ತದೆ. ಆದರೆ, `ಸಾವಿರ ಮೆಟ್ಟಿಲು' ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿದ ಚಿತ್ರ. ಪ್ರಾರಂಭವಾಗಿ 38 ವರ್ಷಗಳ ನಂತರ ಸಂಪೂರ್ಣವಾಗಿ ಬಿಡುಗಡೆಯಾದ ಚಿತ್ರ. ಜೊತೆಗೆ ಅದು ಕಲ್ಯಾಣ್ ಕುಮಾರ್, ವಜ್ರಮುನಿ, ಪಂಢರಿಬಾಯಿ ಮುಂತಾದ ಹಲವು ಜನಪ್ರಿಯ ಕಲಾವಿದರ ಬಿಡುಗಡೆಯಾದ ಕೊನೆಯ ಚಿತ್ರ. ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಪ್ರಾರಂಭವಾಗಿ, ನಂತರ ಕೆ.ಎಸ್.ಎಲ್. ಸ್ವಾಮಿ ಅವರ ನಿರ್ದೇಶನದಲ್ಲಿ ಕಂಪ್ಲೀಟ್ ಆದ ಎರಡನೆಯ ಚಿತ್ರ. ಇದೆಲ್ಲಾ ಕಾರಣಗಳಿಗಾಗಿ `ಸಾವಿರ ಮೆಟ್ಟಿಲು' ಸಾಕಷ್ಟು ಸುದ್ದಿಯಲ್ಲಿತ್ತು. ಆದರೆ, ಇದೆಲ್ಲದರ ಜೊತೆಗೆ ಇನ್ನೊಂದು ಅಪರೂಪದ ದಾಖಲೆಯಿದೆ. ಅದು ವಜ್ರಮುನಿ ಅವರ ಕೊನೆಯ ಚಿತ್ರವಷ್ಟೇ ಅಲ್ಲ, ಮೊದಲ ಚಿತ್ರವೂ ಆಗಿತ್ತು ಎಂಬುದು.

ಹೌದು, `ಮಲ್ಲಮ್ಮನ ಪವಾಡ' ಚಿತ್ರದ ಮೂಲಕ, `ಕನ್ನಡ ಕಲಾರಸಿಕರಿಗೆ ನವನಟನ ಪರಿಚಯ' ಎಂದು ವಜ್ರಮುನಿ ಅವರನ್ನು ಪುಟ್ಟಣ್ಣ ಕಣಗಾಲ್ ಪರಿಚಯಿಸುತ್ತಾರಾದರೂ, ಅದಕ್ಕೂ ಮುನ್ನವೇ ಅವರು `ಸಾವಿರ ಮೆಟ್ಟಿಲು' ಚಿತ್ರದ ಮೂಲಕ ವಜ್ರಮುನಿಯನ್ನು ಕನ್ನಡ ಕಲಾರಸಿಕರಿಗೆ ಪರಿಚಯಿಸಿದ್ದರು. ಆದರೆ, `ಸಾವಿರ ಮೆಟ್ಟಿಲು' ಪ್ರಾರಂಭವಾಗಿ ಒಂದಿಷ್ಟು ಚಿತ್ರೀಕರಣವಾದರೂ, ಅದು ಮುಗಿಯಲಿಲ್ಲ. ಆ ನಂತರ `ಮಲ್ಲಮ್ಮನ ಪವಾಡ' ಮೂಲಕ ವಜ್ರಮುನಿ ಅವರನ್ನು ಪುಟ್ಟಣ್ಣ ಮತ್ತೆ ಪರಿಚಯಿಸಿದರು. ಅದು ಬಿಡುಗಡೆಯಾಗಿ, ವಜ್ರಮುನಿ ಅವರು ಅಪಾರ ಜನಪ್ರಿಯತೆ ಪಡೆದು, ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದು ಎಲ್ಲವೂ ಇತಿಹಾಸ. `ಮಲ್ಲಮ್ಮನ ಪವಾಡ' ಚಿತ್ರವು ಬಿಡುಗಡೆಯಾದ ವಜ್ರಮುನಿ ಅಭಿನಯದ ಮೊದಲ ಚಿತ್ರವಾದರೂ, ಅದಕ್ಕೂ ಮುನ್ನವೇ ಅವರು `ಸಾವಿರ ಮೆಟ್ಟಿಲು' ಚಿತ್ರದಲ್ಲಿ ನಟಿಸಿದ್ದರು ಮತ್ತು ಆ ಚಿತ್ರ ಫ್ಲಾಶ್‍ಬ್ಯಾಕ್ ಭಾಗದಲ್ಲಿ ವಜ್ರಮುನಿ ಅವರನ್ನು ನೋಡಬಹುದು. ಹಾಗಾಗಿ, `ಸಾವಿರ ಮೆಟ್ಟಿಲು' ಚಿತ್ರವು ವಜ್ರಮುನಿ ಅವರ ಮೊದಲ ಮತ್ತು ಕೊನೆಯ ಚಿತ್ರವಾಗಿ ಒಂದು ಅಪರೂಪದ ದಾಖಲೆಯಾಗಿದೆ. ಕೆಲವರ ಮೊದಲ ಚಿತ್ರವೇ ಅವರ ಕೊನೆಯ ಚಿತ್ರ ಆಗುವ ಸಾಧ್ಯತೆ ಇರುತ್ತದೆ. ಯಾವುದೋ ಕಾರಣಕ್ಕೆ ಒಂದು ಚಿತ್ರದಲ್ಲಿ ನಟಿಸಿ ಮರೆಯಾಗುವ ಹಲವು ಕಲಾವಿದರಿದ್ದಾರೆ. ಆದರೆ, ವಜ್ರಮುನಿ ಹಾಗಲ್ಲ. ಅವರದ್ದು ಚಿತ್ರರಂಗದಲ್ಲಿ ಮೂರೂವರೆ ದಶಕಗಳ ಸುಧೀರ್ಘ ಪಯಣ. ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಆದರೂ ಅವರು ಮೊದಲು ಬಣ್ಣ ಹಚ್ಚಿದ ಚಿತ್ರವೇ, 38 ವರ್ಷಗಳ ನಂತರ ಬಿಡುಗಡೆಯಾಗಿ ಅವರ ಕೊನೆಯ ಚಿತ್ರವೂ ಆಯಿತು ಎನ್ನುವುದಿದೆಯಲ್ಲಾ, ಈ ತರಹದ ಉದಾಹರಣೆಗಳು ಭಾರತೀಯ ಚಿತ್ರರಂಗದಲ್ಲಿ ಎಲ್ಲೂ ಸಿಗುವುದಿಲ್ಲ".

ಇಂತಹ ಹಲವಾರು ಕುತೂಹಲಭರಿತ ನೈಜ ಘಟನೆಗಳು ಈ ಕೃತಿಯಲ್ಲಿ ಅಡಕವಾಗಿದೆ.

About the Author

ಚೇತನ್‌ ನಾಡಿಗೇರ್‌

ಪತ್ರಕರ್ತರಾದ ಚೇತನ್‌ ನಾಡಿಗೇರ್‌ ಅವರು ಸಿನಿಮಾ ರಂಗದಲ್ಲಿ ಕೆಲಸ ಮಾಡಿದವರು. ಮೂಲತಃ ಬೆಂಗಳೂರಿನವರಾದ ಅವರ ಸಿನಿಮಾ ಸಾಹಿತ್ಯಾಸಕ್ತರು. ‘ಉದಯವಾಣಿ, ಕನ್ನಡ ಪ್ರಭ’ದಲ್ಲಿ ವರಿದಿಗಾರರಾಗಿದ್ದರು. ತಮ್ಮ ಅನುಭವ ಹಾಗು ಜಗತ್ತಿಗೆ ತೆರೆದುಕೊಳ್ಳದ ವಿಶೇಷ ಸಂಗತಿಗಳನ್ನು ‘ಸ್ಕ್ರೀನ್ ಶಾಟ್‌’ ಕೃತಿಯಲ್ಲಿ ದಾಖಲಿಸಿದ್ದಾರೆ. ...

READ MORE

Reviews

ಸ್ಕ್ರೀನ್ ಶಾಟ್‌ ಎಂಬ ದಾಕಲೆಗಳ ಪುಸ್ತಕ

ಚೇತನ್ ನಾಡಿಗರ್‌ ಎಂಬ ಸಿನಿಮಾ ಪತ್ರಕರ್ತ ತನ್ನ ಹತ್ತಿಪ್ಪತ್ತು ವರ್ಷಗಳ ಸಿನಿಮಾ ಜಗತ್ತಿನ ಅನುಭವದಿಂದ ಏನು ಮಾಡಬಹುದು? ಹಾಸ್ಯ ಸಾಹಿತಿ ನಾಡಿಗೇರ ಕೃಷ್ಣರಾಯರ ಮೊಮ್ಮಗ ಚೇತನ್ ನಾಡಿಗೇರ್ ಸಿನಿಮಾ ಜಗತ್ತಿನ ದಾಖಲಾಗದೆ ದಾಖಲೆಗಳ ಕುರಿತು ಒಂದು ಪುಸ್ತಕ ಬರೆದಿದ್ದಾರೆ. ಇದೊಂದು ಕುತೂಹಲಕಾರಿ ಕೃತಿ. ಇದರಲ್ಲಿ ಯಾರೂ ದಾಖಲಿಸದ ವಿನೂತನ ವಿಚಿತ್ರ ಎಕ್ಷಿಪ್ತ ದಾಖಲೆಗಳಿವೆ. ಉದಾಹರಣೆಗೆ ಇಂಡಿಯಾದಲ್ಲಿ ಅತ್ಯಂತ ಹೆಚ್ಚು ಬಾರಿ ಸಿನಿಮಾ ಆದ ಕತೆ ಯಾವುದು? ಒಂದೇ ಕತೆ ಮತ್ತೆ ಮತ್ತೆ ಸಿನಿಮಾ ಆಗಿದೆಯೇ ಎಂಬ ಪ್ರಶ್ನೆಗೆ ಚೇತನ್ 'ದೇವದಾಸ್‌' ಅನ್ನುತ್ತಾರೆ. ಶರಶ್ಚಂದ್ರ ಚಟ್ಟೋಪಾಧ್ಯಾಯ ಅವರ ದೇವದಾಸ್ ಕಾದಂಬರಿ ಕಳೆದ 9 ವರ್ಷಗಳಲ್ಲಿ ಸುಮಾರು 15 ಸಲಬೇರೆಬೇರೆ ಭಾಷೆಗಳಲ್ಲಿ ಸಿನಿಮಾ ಆಗಿದೆ ಎಂಬುದರಿಂದ ಹಿಡಿದು, ವಜ್ರಮುನಿ ಅವರ ಮೊದಲ ಸಿನಿಮಾವೇ ಅವರ ಕೊನೆಯ ಸಿನಿಮಾ ಆಗಿತ್ತು ಎಂಬ ನಂಬಲಸಾಧ್ಯ ಮಾಹಿತಿಯನ್ನೂ ಮುಂದಿಡುತ್ತಾರೆ. ಮೊದಲ ಸಿನಿಮಾ ಕೊನೆಯ ಸಿನಿಮಾವೂ ಆಗುವುದು ಹೇಗೆಂದರೆ ವಜ್ರಮುನಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಪುಟ್ಟಣ್ಣ ಕಣಗಾಲರ ಸಾವಿರ ಮೆಟ್ಟಿಲುಸಿನಿಮಾದ ಮೂಲಕ. ಅದು ಆರಂಭವಾಗಿ39 ವರ್ಷಗಳ ನಂತರ ಕೊನೆಯಾಯಿತು. ಕೊನೆಯ ದೃಶ್ಯಗಳನ್ನು ಕೆಎಸ್ ಎಲ್ ಸ್ವಾಮಿ ನಿರ್ದೇಶಿಸಿ ಚಿತ್ರ ಬಿಡುಗಡೆ ಮಾಡಿದರು. ಅಷ್ಟು ಹೊತ್ತಿಗೆ ವಜ್ರಮುನಿ ಇರಲಿಲ್ಲ. ಹೀಗಾಗಿ ಅದೇ ಅವರ ಕೊನೆಯ ಸಿನಿಮಾವೂ ಆಗಿಬಿಟ್ಟಿತು. ಇಂಥ ಅನೇಕ ಸಂಗತಿಗಳನ್ನು ಭಾರತೀಯ ಚಿತ್ರರಂಗದ ಕುರಿತು ದಾಖಲಿಸುತ್ತಾರೆ ಚೇತನ್.

ಕೃಪೆ: ಕನ್ನಡ ಪ್ರಭ (2020 ಜನವರಿ 19)

Related Books