ಸಾಹಿತ್ಯ ಮತ್ತು ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ನಾಗತಿಹಳ್ಳಿ ಚಂದ್ರಶೇಖರ ಅವರು, ತಮ್ಮ ಸಿನಿಮಾ ಕೃತಿಗಳನ್ನು ಸಾಹಿತ್ಯ ರೂಪದಲ್ಲಿ ಪ್ರಕಟಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದುದು ‘ಕೊಟ್ರೇಶಿ ಕನಸು’.. ರಾಷ್ಟ್ರೀಯ ಪ್ರಶಸ್ತಿ ಪಡೆದ ಕೃತಿ ಇದು. ದಲಿತ ಯುವಕನೊಬ್ಬ ಅಕ್ಷರ ಆಕಾಂಕ್ಷೆ ಹಾಗೂ ಅದಕ್ಕೆ ಎದುರಾಗುವ ಅಡೆತಡೆಗಳನ್ನು ಈ ಕೃತಿಯ ಮೂಲಕ ಚಿತ್ರಿಸಿಕೊಟ್ಟಿದ್ದಾರೆ. ಕೊನೆಯಲ್ಲಿ, ಆ ಚಿತ್ರಕ್ಕೆ ಪ್ರೇರಕ ಶಕ್ತಿಯಾದ ಸಿ.ಅಶ್ವಥ್ ಬಗೆಗಿನ ಬರಹ ಆಪ್ತವಾಗಿದೆ. ಸಿನಿಮಾ ನಿರ್ಮಾಣದಲ್ಲಿ ಅಥವಾ ಸಿನಿಮಾ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಆಸಕ್ತರಿಗೆ ಈ ಕೃತಿಯು ಉತ್ತಮ ಆಕರ ಗ್ರಂಥ.
©2025 Book Brahma Private Limited.