ಸಿನಿಮಾ ಕ್ಷೇತ್ರದ ಕನಸು ಹೊತ್ತ ಯುವಜನತೆ ಹೆಚ್ಚು ಹೆಚ್ಚು ಕಿರುಚಿತ್ರಗಳನ್ನು ಮಾಡುತ್ತಾ ಅದರ ಟ್ರೆಂಡ್‌ನ್ನೇ ಸೃಷ್ಠಿಸುತ್ತಿದ್ದಾರೆ. ಅಂತವರಿಗಾಗಿಯೇ ಲೇಖಕ ಜಯರಾಮಚಾರಿ ಅವರು ಕಿರುಚಿತ್ರ, ಚಲನಚಿತ್ರಗಳ ನಿರ್ಮಾಣದ ಕುರಿತು ಮಾಹಿತಿ ನೀಡುವ ಕೈಪಿಡಿ ʻಲೆಟ್ಸ್ ಮೇಕ್ ಎ ಶಾರ್ಟ್ ಫಿಲಂʼ ಕೃತಿಯನ್ನು ತಂದಿದ್ದಾರೆ. ಕಿರು ಚಿತ್ರ ಹಾಗೂ ಚಲನಚಿತ್ರ ನಿರ್ಮಾಣದ ಹಂತಗಳಾದ ಕಲ್ಪನೆ ಯಿಂದ ಹಿಡಿದು ಚಿತ್ರಕಥೆ, ಪಾತ್ರಗಳ ಆಯ್ಕೆ, ನಿರ್ದೇಶನ, ಛಾಯಾಚಿತ್ರಗಾರಿಕೆ, ಸಂಪಾದನೆ, ಬಿಡುಗಡೆ ಸೇರಿ ಪ್ರೇಕ್ಷಕರ ಮುಂದೆ ಪ್ರದರ್ಶಿಸುವ ವರೆಗಿನ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ವಿವರವಾಗಿ ಬರೆದಿದ್ದಾರೆ. ಜೊತೆಗೆ, ಪ್ರತಿಯೊಂದು ದೃಶ್ಯಗಳನ್ನು ಚಿತ್ರಿಸುವಾಗ ನಿರ್ದೇಶಕ ಮಾಡಿಕೊಳ್ಳಬೇಕಾದ ತಯಾರಿಗಳು, ಗಮನಿಸ ಬೇಕಾದ ವಿಚಾರಗಳು ಹೀಗೆ ಅದರ ಆಳ ಅಗಲವನ್ನು ವಿವರವಾಗಿ ಹೇಳಿದ್ದಾರೆ.
©2025 Book Brahma Private Limited.