ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ರಚಿಸಿರುವ ಚದುರಿದ ಚಿತ್ರಗಳು ಚಿಗುರಿದ ಕನಸುಗಳು ಚಿತ್ರತಾರೆಯರ ತೆರೆಮರೆಯ ಬದುಕಿನ ನೋವು ನಲಿವುಗಳನ್ನು ಹೃದಯಂಗಮವಾಗಿ ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ ಪುಸ್ತಕವಾಗಿದೆ.
ಬಣ್ಣದ ಬದುಕಿನವರ ಬಣ್ಣರಹಿತ ದುನಿಯಾವನ್ನು ಕನ್ನಡ ಸಿನಿಪ್ರೇಮಿಗಳಿಗೆ ಹೀಗೆ ಪರಿಚಯಿಸಿದ ಖ್ಯಾತಿ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಇಲ್ಲಿ ಪರಿಚಯಿಸಿದ್ಧಾರೆ. ಮೂವತ್ತು ವರ್ಷಗಳ ತಮ್ಮ ವೃತ್ತಿ ಬದುಕಿನಲ್ಲಿ ಕಂಡದ್ದನ್ನು ಓದುಗರಿಗೆ ಬರಹದ ಮೂಲಕ ಲೇಖಕ ಗಣೇಶ್ ಕಾಸರಗೋಡು ಕಟ್ಟಿಕೊಟ್ಟಿದ್ದಾರೆ. ಈ ಪುಸ್ತಕಕ್ಕಾಗಿ ಚಲನಚಿತ್ರ ಸಾಹಿತ್ಯ ರಾಜ್ಯಪ್ರಶಸ್ತಿ ಲಭಿಸಿದೆ.
©2025 Book Brahma Private Limited.