ಮೇರುನಟ

Author : ಶರಣು ಹುಲ್ಲೂರು

Pages 128

₹ 120.00




Year of Publication: 2022
Published by: ವೀರಲೋಕ
Address: 207, 2ನೇ ಮಹಡಿ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು- 560018
Phone: 7022122121

Synopsys

ಲೇಖಕ ಶರಣು ಹುಲ್ಲೂರು ಅವರ ಕೃತಿ ʻಮೇರುನಟ: ದೇಶಕ್ಕೊಬ್ಬ ದುರಂತ ನಾಯಕʼ. ಕನ್ನಡ ಚಿತ್ರರಂಗ ಕಂಡ ಮರೆಯಲಾಗದ ಎರಡು ಅದ್ಭುತ ನಟರು ಡಾ. ವಿಷ್ಣುವರ್ಧನ್ ಹಾಗೂ ಡಾ. ರಾಜ್‌ಕುಮಾರ್.‌‌ ವಂಶವೃಕ್ಷ, ನಾಗರಹಾವು, ಬಂಧನ, ಯಜಮಾನ ಮುಂತಾದ ಹಿಟ್‌ ಚಿತ್ರಗಳಲ್ಲಿ ಅಭಿನಯಿಸಿ ಅಸಖ್ಯಾಂತ ಅಭಿಮಾನಿಗಳನ್ನು ಹೊಂದಿದ್ದ ವಿಷ್ಣುವರ್ಧನ್ ಅವರ ಬದುಕಿನ ಕೆಲವು ಕಹಿ ಘಟನೆಗಳನ್ನು ಲೇಖಕರು ಇಲ್ಲಿ ತೆರೆದಿಟ್ಟಿದ್ದಾರೆ. ತಮ್ಮ ಮೂವತ್ತೇಳು ವರ್ಷಗಳ ಸಿನಿಮಾ ಬದುಕಿನಲ್ಲಿ ಜನಪ್ರಿಯತೆ ಪಡೆದಷ್ಟೇ ವಿವಾದಗಳ ಪಾಲು ಕೂಡಾ ದೊಡ್ಡದು. ನಾಗರಹಾವು ಚಿತ್ರದ ಗೆಲುವಿನ ಸಂಭ್ರಮದಲ್ಲಿದ್ದ ಇವರು ಮುಂದೆ ಇವರ ಬದುಕ್ಕನ್ನೇ ಬದಲಾಯಿಸಿದ ಚಿತ್ರ ʻಗಂಧದ ಗುಡಿʼ ವಿವಾದ. ಹೀಗೆ ಚಿತ್ರೋದ್ಯಮಕ್ಕೆ ಬಂದು 50 ವರ್ಷಗಳಾಗಿದ್ದು, ಅಭಿಮಾನಿಗಳನ್ನು ತೊರೆದು ಹದಿಮೂರು ವರ್ಷಗಳಾಗಿವೆ. ಎಲ್ಲವನ್ನೂ ಮೌನವಾಗಿ ಸಹಿಸುತ್ತಾ ಬಂದ ಅವರ ನೋವು, ಅಪಮಾನಗಳನ್ನು ಶರಣು ಹುಲ್ಲೂರು ಅವರು ಓದುಗರ ಮುಂದಿಟ್ಟಿದ್ದಾರೆ.

About the Author

ಶರಣು ಹುಲ್ಲೂರು

ವೃತ್ತಿಯಿಂದ ಪತ್ರಕರ್ತರಾಗಿರುವ ಡಾ. ಶರಣು ಹುಲ್ಲೂರು ಹುಟ್ಟಿದ್ದು ಗದಗ ಜಿಲ್ಲೆ ರೋಣ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿರುವ ಅವರು ವಿಜಯ ಕರ್ನಾಟಕ ಪತ್ರಿಕಾ ಬಳಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  'ತಪ್ಪು ಮಾಡಿದ ತಾತ', 'ಮುಂದಿರುವ ಮೌನ', 'ಜುಗಲ್ಬಂದಿ' ಎಂಬ ಕವನ ಸಂಕಲನಗಳನ್ನು, ’ಚಂದನ ಸಿಂಚನ’ ಎಂಬ ಬಿ.ಜೆ.ಅಣ್ಣಿಗೇರಿ ಅವರ ಜೀವನ ಚರಿತ್ರೆಯನ್ನು,  ’ಮಲ್ಲಿಗೆ’, ’ಕನಸಿನ ಹುಡುಗ’ ನಾಟಕವನ್ನು ರಚಿಸಿದ್ದಾರೆ. ತಕಧಿಮಿಕಾ, ಮುಂಗಾರಿನ ಕನಸು ಕಾರ್ತೀಕ ದೀಪ, ಬದುಕು, ಮದರಂಗಿ ಮುಂತಾದ ಧಾರಾವಾಹಿಗಳಿಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಕಾರ್ಯನಿರತ ಪತ್ರಕರ್ತರ ಸಂಘದ 'ಅತ್ಯುತ್ತಮ ...

READ MORE

Related Books