‘ಮಧುರ ಮಧುರವೀ ಮಂಜುಳಗಾನ’ದಲ್ಲಿ ಕನ್ನಡ ಸಿನಿಮಾಗಳಲ್ಲಿಯ ಸುಮಧುರ ಗೀತೆಗಳನ್ನು ಸಂಗ್ರಹಿಸಿ ನೀಡಿದ್ದಾರೆ ಕೆ. ಗುರುರಾಜ್.
ಕನ್ನಡದ ಮಟ್ಟಿಗೆ ಇದೊಂದು ಅಪರೂಪದ ಯತ್ನ ಎಂದೇ ಹೇಳಬೇಕು. ಏಕೆಂದರೆ ಇದು ಕನ್ನಡ ಚಿತ್ರರಂಗದ ಮಧುರ ಗೀತೆಗಳ ಗುಚ್ಛವನ್ನು ಸಂಗೀತಪ್ರಿಯರಿಗೆ ಕೊಡುವ ಪ್ರಯತ್ನ ಮಾಡಿದ್ದಾರೆ. ಈ ಕೃತಿಯ ಮತ್ತೊಂದು ವಿಶೇಷವೆಂದರೆ, ಕೇವಲ ಹಾಡುಗಳು ಮಾತ್ರವಲ್ಲ, ಅವನ್ನು ಯಾವ ಶ್ರುತಿಯಲ್ಲಿ ಹಾಡಬೇಕೆಂಬುದೂ ಇದೆ. ಅದಕ್ಕೆ ತಾಳವಾದ್ಯಗಳನ್ನು ಹೇಗೆ ನುಡಿಸಬೇಕೆಂಬ ಮಾಹಿತಿಯೂ ಇದೆ. ಆಯಾ ಗೀತೆಗಳಿಗೆ ಸಂಗೀತ ನಿರ್ದೇಶನ ಮಾಡಿದವರು, ಸಾಹಿತ್ಯ ಒದಗಿಸಿದವರು, ಹಾಡಿದವರು, ಸಿನಿಮಾದ ಹೆಸರಿನ ವಿವರಣೆಯೂ ಇಲ್ಲಿ ಸಿಗುತ್ತದೆ. ಈ ಕೃತಿ ಈಗಾಗಲೆ ಮೂರು ಮುದ್ರಣ ಕಂಡಿದೆ.
©2024 Book Brahma Private Limited.