’ಬೆಳ್ಳಿಅಂಕ’ ಸಿನಿಮಾಕ್ಕೆ ಇರುವ ಸಾಮಾಜಿಕ-ಸಾಂಸ್ಕೃತಿಕ ಜವಾಬ್ದಾರಿಯನ್ನು ತಿಳಿಸುವ ಸಿನಿಮಾ ನಿರ್ದೇಶಕ ಬಿ.ಸುರೇಶ್ ಬರೆದ ಕೃತಿ. ಸಿನಿಮಾದ ವಸ್ತು ಮತ್ತು ತಂತ್ರ ಯಾವ ಹದದಲ್ಲಿ ಸೇರಿ ಬಿಂಬವನ್ನು ಸೃಷ್ಟಿ ಮಾಡಿದೆ-ಮಾಡುತ್ತಿದೆ ಎಂದು ತಿಳಿಯುವ ಪ್ರಯತ್ನವನ್ನು ಈ ಕೃತಿ ಮಾಡುತ್ತದೆ. ಹೀಗೆ ದೃಶ್ಯ, ಶಬ್ದ ಸಂಕಲನ, ಕಥನದಲ್ಲಿ ಬರುವ ಬಿಂಬಗಳಲ್ಲಿ (Images) ಅರ್ಥ ಮತ್ತು ಅನುಭವ ಎಲ್ಲಿ ಮತ್ತು ಹೇಗೆ ಹುಟ್ಟುತ್ತವೆ ಎಂದು ಗುರುತಿಸುವ ಪ್ರಯತ್ನವು ಪುಸ್ತಕದಲ್ಲಿದೆ. ನಿಮ್ ವೆಂಡರ್, ಅಕಿರಾ ಕುರೋಸಾವಾ, ಇಂಗ್‌ಮರ್ ಬರ್ಗ್‌ಮನ್, ನೆಸ್ಟರ್ ಅಲ್‌ಮೆಂಡ್ರೋಸ್ ಮುಂತಾದವರು ಬರೆದ ಲೇಖನಗಳ ಕನ್ನಡ ಅನುವಾದವನ್ನೂ ಸೇರಿಸಿರುವುದರಿಂದ, ವಿಶ್ವವಿಖ್ಯಾತ ನಿರ್ದೇಶಕ, ತಂತ್ರಜ್ಞರು, ಮಾಧ್ಯಮವನ್ನು ಹೇಗೆ ಗ್ರಹಿಸಿದ್ದಾರೆ ಮತ್ತು ದುಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಯಲು ಅನುಕೂಲವಾಗುತ್ತದೆ.
©2025 Book Brahma Private Limited.