ಚಿತ್ರ-ಚಿತ್ರಕಥೆ ಹಾಗೂ ಚಲನಚಿತ್ರವಾಗಿಯೂ ಗಮನ ಸೆಳೆದ ಕೃತಿ-ಪುಟ್ಟಕ್ಕನ ಹೈವೆ. ನಾಗತಿಹಳ್ಳಿ ಚಂದ್ರಶೇಖರ ಅವರು ಬರೆದ ಕಾದಂಬರಿ ಆಧರಿತ ಚಿತ್ರಕಥೆ ಇದು. ಲೇಖಕ ಬಿ. ಸುರೇಶ ಅವರು ಚಲನಚಿತ್ರವನ್ನು ನಿರ್ದೇಶಿಸಿದ್ದು, 2011ರ ಮೇ ತಿಂಗಳಲ್ಲಿ ಮೊದಲು ಬಿಡುಗಡೆಯಾಗಿತ್ತು. ಹೆದ್ದಾರಿ ನಿರ್ಮಾಣಕ್ಕಾಗಿ ರೈತರ ಹೊಲಗಳನ್ನು ಖರೀದಿಸುವ ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಡೆಯುವ ರೈತರನ್ನು ಸಂಚಿಗೆ ಗುರಿಯಾಗಿಸುವುದು, ರೈತರ ನೋವುಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಈ ಚಲನಚಿತ್ರಕ್ಕೆ 2010-2011 ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರ ಪ್ರಶಸ್ತಿ ಹಾಗೂ 4ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದಿದೆ.
©2024 Book Brahma Private Limited.