ಜಪಾನಿನ ಚಲನಚಿತ್ರ ನಿರ್ದೆಶಕ ಅಕಿರ ಕುರೊಸವನ ಅವರ ರಶೋಮೊನ್ ಚಿತ್ರಲೇಖನ, ಜಪಾನಿ ಚಲನಚಿತ್ರದ ಇತಿಹಾಸ, ಕುರೊಸವನ ಅವರ ಬದುಕು , ರಶೋಮೊನ್ ಕೃತಿ ವಿಮರ್ಶೆ ಹಾಗೂ ಚಿತ್ರಕ್ಕೆ ಆಧಾರವಾದ ಎರಡು ಕಥೆಗಳ ಅನುವಾದವನ್ನು ಈ ಕೃತಿಯು ಒಳಗೊಂಡಿದೆ. ರಶೋಮೊನ್ ಚಲನಚಿತ್ರವು, 1951ರಲ್ಲಿ ಜರುಗಿದ ವೆನಿಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದಿತ್ತು. ಪೌರ್ವಾತ್ಯ ಚಿತ್ರವೊಂದು ಅದೇ ಮೊದಲ ಬಾರಿಗೆ ವಿಶ್ವದ ಶ್ರೇಷ್ಠ ಚಲನಚಿತ್ರದ ಪ್ರಶಸ್ತಿ ಬಾಚಿಕೊಂಡಿದ್ದು, ವಿಶ್ವವನ್ನೇ ಬೆರಗುಗೊಳಿಸಿತ್ತು. ಇದಕ್ಕಿರುವ ಕಾರಣಗಳನ್ನೂ ಸಹ ಲೇಖಕರು ವಿಶ್ಲೇಷಿಸಿದ್ದಾರೆ.
©2024 Book Brahma Private Limited.