ಚಿತ್ರರಂಗದ ದಶಕದ ಅನುಭವವನ್ನು ಕಟ್ಟಿಕೊಟ್ಟಿರುವ ಕೃತಿ ’ಶುಭಂ’. ಒಂದು ತಲೆಮಾರಿನ ಕನ್ನಡ ಚಿತ್ರರಂಗ ತೆರೆದಿಟ್ಟ ಅಂತರಂಗ. ಚಿತ್ರರಂಗ ಬದುಕಿನ ಏರುಪೇರು, ಯಶಸ್ಸು, ಸಾಹಸ ಎಲ್ಲವನ್ನೂ ಕತೆಯ ರೂಪದಲ್ಲಿ ಲೇಖಕರು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ರಾಜಕುಮಾರ್ ಬಗೆಗಿನ ಬರಹಗಳು, ಪಿ.ಬಿ.ಶ್ರೀನಿವಾಸ, ಆರತಿ, ರಾಜು ಅನಂತಸ್ವಾಮಿ, ವಿಷ್ಣು, ರವಿಚಂದ್ರನ್ ಹೀಗೆ ಹಲವಾರು ತಾರೆಯರೊಂದಿಗಿನ ಒಡನಾಟವನ್ನು ಲೇಖಕ ಗಣೇಶ್ ಕಾಸರಗೋಡು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2025 Book Brahma Private Limited.