ಚಿತ್ರೀಕರಣದ ವೇಳೆ ಕಲಾವಿದರು, ತಂತ್ರಜ್ಞರ ಅಪರೂಪದ ಅನುಭವಗಳನ್ನು ಅಕ್ಷರರೂಪಕ್ಕೆ ಇಳಿಸಿದ್ದಾರೆ ಪತ್ರಕರ್ತ ಶಶಿಧರ ಚಿತ್ರದುರ್ಗ. ತೆರೆಯ ಹಿಂದೆ ನಡೆದ ಘಟಾನಾವಳಿಗಳ ಒಟ್ಟು ಮೊತ್ತ ಈ ಕೃತಿ. ರಂಜನೆಯ ಜೊತೆಗೆ ಭಾವನಾತ್ಮಕವಾಗಿ ಸೆಳೆಯುವ ಅನೇಕ ಅಂಶಗಳು ಕೃತಿಯಲ್ಲಿವೆ.
ಪತ್ರಿಕೆಗಳು ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಬರೆದ ಕ್ಯಾಮರಾ ಹಿಂದಿನ ನೋವು, ನಲಿವು, ತಮಾಷೆಯ ಪ್ರಸಂಗಗಳು. ಅರವತ್ತೈದು ಕಲಾವಿದರು ಹಾಗೂ ತಂತ್ರಜ್ಞರ ನೂರಾರು ಪ್ರಸಂಗಗಳು ದಾಖಲಾಗಿವೆ. ಹಿರಿಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದಿರುವ ಅಪರೂಪದ ಫೋಟೋಗಳು ಪುಸ್ತಕದಲ್ಲಿವೆ. ಹಿರಿಯ ಚಿತ್ರನಿರ್ದೇಶಕ ಪಿ.ಶೇಷಾದ್ರಿ ಮುನ್ನುಡಿ ಬರೆದಿದ್ದು, ಹಿರಿಯ ಸಂಗೀತ ಸಂಯೋಜಕ ಮತ್ತು ಚಿತ್ರಸಾಹಿತಿ ಹಂಸಲೇಖರ ಬೆನ್ನುಡಿ ಬರೆದಿದ್ದಾರೆ.
©2025 Book Brahma Private Limited.