ಸಿನೆಮಾ ಒಂದು ಭಾಷೆ. ಅದು ಛಾಯಾಗ್ರಹಣ, ಚಿತ್ರಕಲೆ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ನಾಟಕ ಕಲೆಗಳನ್ನು ಒಳಗೊಂಡಿರುವ, ಮತ್ತು ಬಿಡಿ ಬಿಡಿಯಾಗಿ ಅವೇ ಅಲ್ಲದ, ಐದೂ ಇಂದ್ರಿಯಗಳ ಅನುಭವವನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವ ವಿಶಿಷ್ಟ ಭಾಷೆ. ಇಷ್ಟಾದರೂ, ಸಾಹಿತ್ಯ ಕೃತಿಯ ಅಥವಾ ನಾಟಕದ ದೃಶ್ಯರೂಪವಾಗದೆ, ತನ್ನದೇ ಆದ ವ್ಯಾಕರಣ, ನುಡಿಗಟ್ಟು ಮತ್ತು ಪ್ರತಿಮಾವಿಧಾನವನ್ನು ಸಿನೆಮಾ ಹೊಂದಿದೆ. ಸ್ವರೂಪದಲ್ಲಿ ಕಾವ್ಯಕ್ಕೆ ಹತ್ತಿರವಿರುವ ಸಿನೆಮಾ, ಚಿಂತಕರಿಗೆ, ಸಂವೇದನಾಶೀಲರಿಗೆ, ಸೂಕ್ಷ್ಮಜ್ಞರಿಗೆ ಹೇಳಿಮಾಡಿಸಿದ ಕಲಾ ಮಾಧ್ಯಮ. ಈ ಸಂಗತಿಗಳ ಪ್ರಾಥಮಿಕ ಪರಿಚಯವಾದರೂ ಇಲ್ಲದೆ ಸಿನೆಮಾ ಮಾಡುವುದಾಗಲಿ, ನೋಡುವುದಾಗಲಿ ಕಷ್ಟಸಾಧ್ಯ ಎಂಬುದನ್ನು ಈ ಪುಸ್ತಕ ಸಿನೆಮಾ ಕೃತಿಗಳ ಮೂಲಕವೇ ಪರಿಚಯಿಸುತ್ತದೆ.
©2025 Book Brahma Private Limited.