ಲೇಖಕ ಸಿರಿಗೇರಿ ಯರಿಸ್ವಾಮಿ ಅವರು ಕನ್ನಡ ಚಲನಚಿತ್ರ ನಟ ಅಂಬರೀಶ್ ಅವರ ಕುರಿತು ಬರೆದ ಕೃತಿ-ಸ್ನೇಹಶೀಲ. ತ.ರಾ.ಸು ಕಾದಂಬರಿ-‘ನಾಗರಹಾವು’ ಮೂಲಕ ಕನ್ನಡ ಚಲನಚಿತ್ರರಂಗವನ್ನು ಪ್ರವೇಶಿಸಿದ ನಟ ಅಂಬರೀಶ ಅವರು ತಮ್ಮ ವಿಶಿಷ್ಟ ಹಾವಭಾವದೊಂದಿಗಿನ ನಟನೆಯ ಮೂಲಕ ಪ್ರೇಕ್ಷಕರ ಗಮನ ಸೆಳೆದವರು. ಮಾತ್ರವಲ್ಲ; ಅಭಿಮಾನಿಗಳಿಂದ ‘ರೆಬೆಲ್ ಸ್ಟಾರ್’ ಎಂಬ ಖ್ಯಾತಿಗೆ ಪಾತ್ರರಾದರು. ಕನ್ವರ್ ಲಾಲ್ ಪಾತ್ರ ‘ಅಂತ’ ಕನ್ನಡ ಚಲನಚಿತ್ರವು ಇವರಿಗೆ ಭರ್ಜರಿ ಹೆಸರು ತಂದು ಕೊಟ್ಟಿತು. ಉದಯೋನ್ಮುಖ ಕಲಾವಿದರಿಗೆ ಪೋಷಕರೂ ಆಗಿದ್ದ ಅಂಬರೀಶ, ನಾಯಕ ನಟನಾಗಿ, ಗೌರವಪಾತ್ರವಾಗಿ..ಹೀಗೆ ಯಾವುದೇ ಪಾತ್ರವಿರಲಿ, ಅದಕ್ಕೆ ತಮ್ಮ ನಟನಾ ಕಲೆಯ ಮೂಲಕ ನ್ಯಾಯ ಸಲ್ಲಿಸಿದವರು. ಈ ನಟನ ಕಲಾ ಸಾಧನೆ ಕುರಿತು ವಿವರಿಸಿದ ಕೃತಿ ಇದು.
©2025 Book Brahma Private Limited.