‘ಸಿನಿ ಚಿಂತನೆ’ ಕೃತಿಯು ಹಂಪೇಶ್ ಕೆ.ಎಸ್ ಅವರ ಸಂಪಾದಿತ ಲೇಖನಗಳ ಸಂಕಲನವಾಗಿದೆ. ಈ ಕೃತಿಯು ಜನಪದ ಕಲೆಗಳು ಮತ್ತು ಸಿನೇಮಾ(ಸತೀಶ್ ಕುಮಾರ್ ಅಂಡಿಂಜೆ), ಕನ್ನಡ ಚಲನಚಿತ್ರ: ಮಾರಾಟ ಹಾಗೂ ಮಾರುಕಟ್ಟೆಯ ಸವಾಲುಗಳು( ನಂದಿನಿ ಲಕ್ಷ್ಮೀಕಾಂತ್), ಸಿನಿಮಾ ಮತ್ತು ನಿರ್ದೇಶನ(ಶ್ರೀನಿವಾಸ ಪೆಜತ್ತಾಯ), ಸಮಾಜ ,ಸಿನಿಮಾ ಮತ್ತು ಕಥನ( ಗೀತಾ ಏ.ಜೆ), ಸಿನೆಮಾ ಮತ್ತು ಸಿದ್ದಾಂತಗಳು ( ಮೌಲ್ಯ), ಬಯೋಪಿಕ್ ಸಿನಿಮಾಗಳು(ದೀಪ್ತಿ), ಸಿನಿಮಾ ಪರಾಮರ್ಶನ( ಅಮೀತ್ ಎಂ.ಎಸ್), ಕಲಾತ್ಮಕ ಚಿತ್ರಗಳಲ್ಲಿ ಭಾವಾಭಿವ್ಯಕ್ತಿ(ಪವಿತ್ರ ಬಿದ್ಕಲ್ಕಟ್ಟೆ), ಸಿನಿ ಕಲಾವಿದರಿಗಾಗಿ ಅಂತರಾಷ್ಟ್ರೀಯ ಪ್ರಶಸ್ತಿ( ಸತ್ಯನಾರಾಯಣ ಟಿ), ಸಿನಿಮಾ ಮತ್ತು ಡಿಜಿಟಲ್ ಮಾರ್ಕೆಟಿಂಗ್( ಶಶಾಂಕ್) ಒಳಗೊಂಡಂತಹ ಹತ್ತು ಪರಿವಿಡಿಗಳನ್ನು ಒಳಗೊಂಡಿದೆ. ಲೇಖಕರ ಪರಿಚಯದಲ್ಲಿ ಕೃತಿಯ ಕುರಿತು ಸಂಪಾದಕ ಹಂಪೇಶ್ ಕೆ.ಎಸ್ ಹೀಗೆ ಹೇಳಿಕೊಂಡಿದ್ದಾರೆ; ಸಿನಿಮಾ ನಿರ್ದೇಶಕನೊಬ್ಬ ವಿಷಯಗಳನ್ನು ಕೇವಲ ಕೇಳುವುದಲ್ಲ, ಆತ ಭಾವಿಸಿದ್ದನ್ನು ತೋರಿಸುತ್ತಾನೆ ಎಂದು ಆಲ್ಪೈಡ್ ಹಿಚ್ಕಾಕ್ ಅಭಿಪ್ರಾಯಪಟ್ಟಿದ್ದಾನೆ. ಪ್ರಪಂಚದಲ್ಲಿ ಸಿನಿಮಾ ಎಂಬ ಮಾಧ್ಯಮ ಆಧುನಿಕತೆಯ ಪರಿಚಯವಿಲ್ಲದವರನ್ನು, ಅಕ್ಷರಸ್ತರು ಮತ್ತು ಅನಕ್ಷರಸ್ತರು ಎಂಬ ಭೇದವಿಲ್ಲದೆ ಎಲ್ಲಾ ಬಗೆಯ ಜನರನ್ನು ಸಮಾನವಾಗಿ ತನ್ನೆಡೆಗೆ ಆಕರ್ಷಿಸಿಕೊಂಡಿದೆ. ಸಿನಿಮಾ ಎಲ್ಲಾ ಬಗೆಯ ಕಲಾ ಪ್ರಕಾರಗಳ ವೈವಿದ್ಯಮಯ ಸಂಗಮ. ಈ ಚಲನಚಿತ್ರವೆಂಬ ವಿಭಿನ್ನ ಕಲಾ ಪ್ರಕಾರದಲ್ಲಿ ಹೊರಗಿನ ತಂತ್ರಾಂಶಗಳು ವಿಜ್ಞಾನದ ಉತ್ಪನ್ನಗಳಾದರೆ, ಒಳ ಭಾವಗಳು ವೈಯಕ್ತಿಕ ಮತ್ತು ಸಮಗ್ರ ಸಂವೇದನೆಗಳಾಗಿವೆ. ‘ಪ್ರೆಸೆನ್ಸ್ ಆಫ್ ವಿಷನ್’, ‘ದಿ ಮ್ಯಾಜಿಕ್ ಲಾಟಿನ್’, ‘ದ ಫಿಲ್ಮ್ ರೋಲ್ ಆಫ್ ಈಸ್ಟ್ ಮಾನ್’, ‘ದ ಕೈನೆತೋಸ್ಕೋಪ್ ಆಫ್ ಎಡಿಸನ್’ ಈ ಎಲ್ಲಾ ಅನ್ವೇಷಣೆಗಳು ಮತ್ತು ೧೮೯೫ರಲ್ಲಿ ಕಂಡುಹಿಡಿಯಲಾದ ಲೂಮಿಯರ್ - ಸಹೋದರರ ಚೊಚ್ಚಲ ನೈಜ ಸಿನಿಮಾ ಪ್ರದರ್ಶಕ ವಿಜ್ಞಾನದ ಉತ್ಪನ್ನಗಳಾಗಿವೆ. ಸತ್ಯಜಿತ್ ರೇ ಗಮನಿಸಿದಂತೆ ವೇಷ-ಭೂಷಣ, ಧ್ವನಿ ಜಾಡು, ಅಭಿನಯ ಮತ್ತು ಮೇಲಿನ ಎಲ್ಲಕ್ಕಿಂತಲೂ ನಿರ್ದೇಶನಕ್ಕೆ ಅತಿ ಹೆಚ್ಚಿನ ಪ್ರತಿಭೆ ಮತ್ತು ಕಲಾತ್ಮಕತೆಯ ಅಗತ್ಯವಿದೆ ಎಂದಿದ್ದಾರೆ. ಒಂದು ಚಲನಚಿತ್ರವು ಕಾಲ್ಪನಿಕ, ನಾಟಕೀಯತೆ, ಪದ್ಯ, ಛಾಯಾಗ್ರಹಣ, ಸಂಗೀತ ಮತ್ತು ಇತರ ಕಲೆಗಳ ಸಮಗ್ರ ಅಂಶಗಳನ್ನು ಒಳಗೊಂಡಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಸಿನಿಮಾಗಳು ಯಾವುದೇ ಬಗೆಯ ವಿಭಿನ್ನ ಅಭಿವ್ಯಕ್ತಿಗೆ ಗೌರವ, ಆದರ, ಪ್ರಾಧಾನ್ಯತೆಗಳನ್ನು ಕೊಡುತ್ತಿವೆ. ಈಗ ಸಿನಿಮಾಗಳಲ್ಲಿ ಯಾವ ವಿಷಯ ಆಧರಿಸಿ ಮಾಡುತ್ತಿದ್ದೇವೆ ಅನ್ನುವುದರ ಜೊತೆಗೆ, ಇದರಿಂದ ಎಷ್ಟು ಜನರನ್ನು ತಲುಪುತೇವೇ ಎನ್ನುವುದು ಮುಖ್ಯವಾಗುತ್ತದೆ. ಒಂದು ಸಿನಿಮಾ ಮೂಲತಃ ವಿಷಯಗಳ ಅಭಿವ್ಯಕ್ತಿಗಾಗಿ ಅಥವಾ ಸೌಂದರ್ಯಾತ್ಮಕ ಪರಿಭಾಷೆಯ ವಿಷಯವಾಗಿದೆ. ಸಿನಿಮಾಗಳು ಅತೀ ಕಡಿಮೆ ವರ್ಷದಲ್ಲಿ ಸ್ಪಟಿಕಗಳಂತೆ ರೂಪುಗೊಂಡಿವೆ. ಇತರ ಕಲಾ ಪ್ರಕಾರಗಳಂತೆ ಸಿನಿಮಾ ಅಗಾಧವಾಗಿ ಬೆಳೆಯುತ್ತಿವೆ. ಈ ಬೆಳವಣಿಗೆಯು ಆಧುನಿಕತೆಯ ಬಹುಮುಖ ದೃಷ್ಟಿಕೋನ ಮತ್ತು ಅರಿವು, ಸಾಂಕೇತಿಕತೆ ಮತ್ತು ಕಾಲ್ಪನಿಕತೆಗಳ ಆಧಾರದಲಿ ರೂಪುಗೊಳ್ಳುತ್ತಿವೆ. ಭಾರತೀಯ ಸಿನಿಮಾದ ಪಯಣವು ರಾಜ ಹರಿಶ್ಚಂದ್ರದಿಂದ ಶುರುವಾಗಿ, ಇಂದು ಭಾರತೀಯ ಸಿನಿಮಾರಂಗವು ಪ್ರಖ್ಯಾತಿ ಪಡೆದದ್ದು ಮಾತ್ರವಲ್ಲದೆ, ವಿಶ್ವದಲ್ಲಿ ಎರಡನೇ ಅತಿ ಹೆಚ್ಚು ಸಿನಿಮಾ ತಯಾರಕರಾಗಿ ಹೊರಹೊಮ್ಮಿದ್ದೇವೆ. ಅವುಗಳಲ್ಲಿ ‘ಮೇಕ್ ಬಿಲೀವ್ ಯಾರೀ’, ‘ರಜಲ್ - ಡಸಲ್’, ‘ಗೀತೆ ಮತ್ತು ನೃತ್ಯ ಸಂಗತಿ’, ಇವುಗಳು ಕಾಲ್ಪನಿಕ ನೈಜ್ಯತೆಗಳ ಜೊತೆ ಸಂಬಂಧ ಹೊಂದಿವೆ ಎಂಬುದನ್ನು ಅಭಿಪ್ರಾಯಿಸಿದ್ದಾರೆ.
©2024 Book Brahma Private Limited.