’ನಟ ನಾಡೋಜ’ ಇದು ವರನಟ ರಾಜ್ ಕುಮಾರ್ ಅವರ ಜೀವನ ಚರಿತ್ರೆ. ರಾಜಕುಮಾರ್ ಅವರ ಹುಟ್ಟಿನಿಂದ ಅವರ ಸಾಯುವವರೆಗಿನ ಜೀವನದ ಎಲ್ಲಾ ಘಟ್ಟಗಳ ಚಿತ್ರಣ ಈ ಕೃತಿಯಲ್ಲಿದೆ. ಈ ಕೃತಿಯು ನಾಲ್ಕು ಭಾಗಗಳನ್ನು ಒಳಗೊಂಡಿದ್ದು, ಹಂತ ಹಂತವಾಗಿ ರಾಜ್ ಕುಮಾರ್ ಜೀವನವನ್ನು ಅನಾವರಣ ಮಾಡಲಾಗಿದೆ. ರಾಜ್ ಕುಮಾರ್ ಅವರ ಮನೆತನದ ಹಿನ್ನೆಲೆ, ಮನೆತನದ ಪರಿಚಯ, ರಾಜ್ ಕುಮಾರ್ ಬೆಳೆದ ಬಗೆ, ರಂಗಭೂಮಿಯ ಪ್ರವೇಶ, ತಂದೆಯ ಅಗಲಿಕೆ, ಮದುವೆ, ಇವು ಮೊದಲ ಭಾಗದಲ್ಲಿದ್ದರೆ, ಎರಡನೇ ಭಾಗದಲ್ಲಿ ರಾಜ್ ಕುಮಾರನ ಚಿತ್ರರಂಗ ಪ್ರವೇಶ, ಮುತ್ತುರಾಜ ರಾಜಕುಮಾರನಾದ ಬಗೆ, ನಟ ಗಾಯಕನಾದದ್ದು, ಗೋಕಾಕ ಚಳುವಳಿ, ಮುಂತಾದ ಲೇಖನಗಳಿವೆ. ಮೂರನೇ ಭಾಗದಲ್ಲಿ ವಿರಪ್ಪನ್ ನ ಅಡಗುತಾನದಲ್ಲಿ ರಾಜಕುಮಾರ್ ಕಳೆದ ದಿನಗಳ ಅನುಭವ, ಮತ್ತು ವಿರಪ್ಪನ್ ಬಗ್ಗೆ ರಾಜ್ಕುಮಾರ್ ಹೊಂದಿದ್ದ ಅಭಿಪ್ರಾಯವನ್ನು ನೀಡಲಾಗಿದೆ. ನಾಲ್ಕನೇ ಭಾಗದಲ್ಲಿ ಅಪ್ಪಟ ದೇಸಿ ಪ್ರತಿಭೆ, ಕನ್ನಡಿಗರ ಮೌಲ್ಯಪ್ರಜ್ಞೆ ರಾಜ್, ಪಾರ್ವತಮ್ಮನವರು, ಕುವೆಂಪು-ರಾಜಕುಮಾರ್-ದೇವರಾಜ್ ಅರಸು, ಎಂಬ ಲೇಖನಗಳಿವೆ.
©2025 Book Brahma Private Limited.