‘ಕನ್ನಡ ಚಿತ್ರಗೀತೆಗಳ ಚಾರಿತ್ರಿಕ ಅಧ್ಯಯನ’ ಎನ್.ಎಸ್. ಶ್ರೀಧರಮೂರ್ತಿ ಅವರ ಕೃತಿ. ಚಲನಚಿತ್ರ ಮಾಧ್ಯಮಕ್ಕೆ ಭಾರತೀಯ ಚಿತ್ರರಂಗ ನೀಡಿದ ಕೊಡುಗೆ ಎಂದೇ ಗುರುತಿಸಲ್ಪಟ್ಟಿರುವ ಪ್ರಕಾರ ಚಿತ್ರಗೀತೆಗಳು. ಇವು ಜನಪ್ರಿಯ ನೆಲೆಯಲ್ಲಿ ಹೆಚ್ಚಾಗಿ ಗುರುತಿಸಲ್ಪಟ್ಟಿದ್ದರೂ ಮಾಧ್ಯಮದ ಕಲಾತ್ಮಕ ಸ್ವರೂಪಕ್ಕೆ ತನ್ನದೇ ಆದ ಅನನ್ಯ ಕಾಣಿಕೆಯನ್ನು ನೀಡಿವೆ. ಆದರೆ ಇವುಗಳ ಕುರಿತು ಅಕಾಡೆಮಿಕ್ ಎನ್ನಿಸಬಲ್ಲ ಚರ್ಚೆಗಳು ನಡೆದಿಲ್ಲವೆಂದೇ ಹೇಳಬೇಕು. ನಡೆದಿರುವ ಚರ್ಚೆಗಳಲ್ಲೂ ಮೂಲತಃ ಅಮೂರ್ತ ನೆಲೆಯ ಇವುಗಳನ್ನು ಮೂರ್ತ ನೆಲೆಯ ಸಾಹಿತ್ಯದ ಮಾನದಂಡದಲ್ಲಿ ಹಿಡಿಯಲು ಹೋಗಿ ಉಂಟಾಗಿರುವ ಗೊಂದಲಗಳು ಇದುವರೆಗಿನ ಚರ್ಚೆಯ ಕೇಂದ್ರ ತಪ್ಪಿ ಹೋಗಲು ಕಾರಣವಾಗಿದೆ.
ಕನ್ನಡದಲ್ಲಿ ಚಿತ್ರಗೀತೆಗಳಿಗೆ ಸರಿ ಸುಮಾರು ಎಂಟು ದಶಕಗಳ ಇತಿಹಾಸವಿದೆ. ಅವುಗಳು ಚಲನಚಿತ್ರವನ್ನು ಜನಪ್ರಿಯವಾಗಿಸಿದಂತೆ ಶ್ರೇಷ್ಠ ಪ್ರಯೋಗಗಳ ಚಲನಚಿತ್ರ ಮಾಧ್ಯಮ ಪ್ರಬುದ್ಧತೆಯನ್ನು ಪಡೆಯಲೂ ಕಾರಣವಾಗಿದೆ. ಕನ್ನಡ ಚಿತ್ರಗೀತೆಯ ಪರಂಪರೆಯಲ್ಲಿ ನಡೆದಿರುವ ಸಂಗೀತ ಮತ್ತು ಸಾಹಿತ್ಯದ ನೆಲೆಯ ಪ್ರಯೋಗಗಳನ್ನು ಗುರುತಿಸಿ, ಅವುಗಳನ್ನು ಸೈದ್ಧಾಂತಿಕ ಚೌಕಟ್ಟಿನಲ್ಲಿ ವಿಶ್ಲೇಷಿಸುವ ಮಹತ್ವದ ಪ್ರಯತ್ನವನ್ನು ಈ ಕೃತಿ ಮಾಡಿದೆ.
©2025 Book Brahma Private Limited.