ಕೆ.ವಿ. ಸುಬ್ಬಣ್ಣ ಹಾಗೂ ಕೆ.ವಿ. ಅಕ್ಷರ ಅವರು ಜೊತೆಯಾಗಿ ‘ಸಿನೆಮಾದ ಯಂತ್ರಭಾಷೆ’ ಕೃತಿ ರಚಿಸಿದ್ದಾರೆ. ಒಟ್ಟು ವಿಷಯವನ್ನು ಎರಡು ವಿಭಾಗಗಳಾಗಿಸಿ, ಮೊದಲ ಭಾಗದಲ್ಲಿ ಸಿನೆಮಾದ ಹುಟ್ಟು-ಹಿನ್ನೆಲೆ, ಯಂತ್ರ ಪ್ರಕ್ರಿಯೆ, ತಂತ್ರ ಪ್ರಕ್ರಿಯೆ, ನಿರ್ಮಾಣ ಪ್ರಕ್ರಿಯೆ, ಭಾಷಾ ಪ್ರಕ್ರಿಯೆ ಶೀರ್ಷಿಕೆಯ ಅಧ್ಯಾಯಗಳು ಹಾಗೂ ಎರಡನೇ ವಿಭಾಗದಲ್ಲಿ ಪಾರಿಭಾಷಿಕ ಶಬ್ದಗಳನ್ನು ವಿವರಿಸಲಾಗಿದೆ. ಚಲನಚಿತ್ರದ ಯಂತ್ರಕ್ಕೆ ಅದರದೇ ಆದ ಭಾಷೆ ಇದೆ. ಚಲನಚಿತ್ರ ತಯಾರಕರು, ತಂತ್ರಜ್ಞರು ಹಾಗೂ ವಿದ್ಯಾರ್ಥಿಗಳಿಗೆ ಈ ಕೃತಿ ಕೈಪಿಡಿಯಾಗಿದೆ ಎಂದರೂ ಲೇಖಕರು ಇದನ್ಳು ಅಲ್ಲಗಳಿದಿದ್ದಾರೆ. ಬದಲಾಗಿ, ಚಲನಚಿತ್ರಗಳ ಯಂತ್ರ ಭಾಷೆಯ ಅರಿವು ಮೂಡಿಸುವುದು ಕೃತಿಯ ಉದ್ದೇಶ ಎಂದು ಸ್ಪಷ್ಟಪಡಿಸಿದ್ದಾರೆ.
©2024 Book Brahma Private Limited.