ರೇಖಾ ಕೆಂಡಸಂಪಿಗೆ ಕಹಾನಿ

Author : ದೇವಶೆಟ್ಟಿ ಮಹೇಶ್

Pages 72

₹ 60.00




Year of Publication: 2015
Published by: ಲಕ್ಷ್ಮೀ ಮುದ್ರಣಾಲಯ
Address: ಚಾಮರಾಜ ಪೇಟೆ, ಬೆಂಗಳೂರು-18

Synopsys

ಬಾಲಿವುಡ್ ತಾರೆ ರೇಖಾಳ ಜೀವನ ಕಥನವನ್ನು ದೇವಶೆಟ್ಟಿ ಮಹೇಶ್ ಅವರು ‘ರೇಖಾ’ ಕೆಂಡಸಂಪಿಗೆ ಕಹಾನಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಆಕೆಯ ಬದುಕಿನ ವಿವಿಧ ಮಜಲುಗಳನ್ನು ಇಲ್ಲಿ ತೆರೆದಿಡಲಾಗಿದೆ. ವಿಷ ಕುಡಿದರೂ ನಗುತ್ತಿದ್ದಳು, ದುಂಬಿಯಂಥ ಗುಣ ಅಪ್ಪನಿಂದ ಬಂತಾ?, ಮೊದಲ ಚಿತ್ರದಲ್ಲೇ ತುಟಿಗೆ ಮುತ್ತಿಡಿಸಿಕೊಂಡಳು, ಹುಡುಗಿಯರನ್ನೂ ಆಕೆ ಮೋಹಿಸುತ್ತಿದ್ದಳು, ಇನ್ನೊಬ್ಬರ ಗಂಡನನ್ನು ಬುಟ್ಟಿಗೆ ಹಾಕಿಕೊಂಡವಳು, ತಾಳಿತಾನೇ ಕಟ್ಟಿಕೊಂಡು ನಿಂತಿದ್ದಳು, ಸಿಲ್ ಸಿಲಾ ಹೇಗಾಯಿತು ಏನಾಯಿತು ಗೊತ್ತೆ?, ಎಲ್ಲಾ ಸಂಬಂಧಕ್ಕೂ ಕೊನೆ ಇರಬೇಕಲ್ಲವೆ?, ಆಕೆಯ ಜಾಗದಲ್ಲಿ ನಾನಿದ್ದಿದ್ದರೆ ಬಚ್ಚನ್ ಮರ್ಡರ್ ಆಗುತ್ತಿದ್ದ, ನಂಗೆ ಕೈ ಕೊಡ್ತಿಯಾ?, ನೋಡ್ತಿರು ಏನ್ ಮಾಡ್ತೀನಿ, ರಾಅಜ್ ಬಬ್ಬರ್’ಗೆ ಬಚ್ಚನ್ ಬೆದರಿಸಿದ್ದರು!, ಇನ್ನೊಬ್ಬ ಸತ್ತರೆ ನಂಗೇನು ನಷ್ಟ, ಅಕ್ಷಯ್ ತೆಕ್ಕೆಯಲಿ ನಕ್ಕಳು, ಈಕೆಯ ಒಳಗೆ ಅಭಿನೇತ್ರಿ ಇದ್ದಳು ಇಲ್ಲಿನ ಪ್ರಮುಖ ಅಧ್ಯಾಯಗಳಾಗಿವೆ.

About the Author

ದೇವಶೆಟ್ಟಿ ಮಹೇಶ್

 ಪಬ್ಲಿಕ್ ಟಿ ವಿ ಸಿನಿಮಾ ವಿಭಾಗದ ಮುಖ್ಯಸ್ಥರಾದ ಮಹೇಶ ದೇವಶೆಟ್ಟಿ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ೦) ಪದವಿ ಪಡೆದಿದ್ದಾರೆ. ಮೂಲತಃ ಯಾದಗಿರಿ ಜಿಲ್ಲೆಯ ರಂಗಂಪೇಟೆಯವರಾದ ಮಹೇಶ ಅವರ ಹುಟ್ಟಿ-ಬೆಳೆದದ್ದು ಕೊಪ್ಪಳದಲ್ಲಿ. ಧಾರವಾಡದ ಜೆ.ಎಸ್‌.ಎಸ್‌. ಕಾಲೇಜಿನಲ್ಲಿ ಪದವಿ (ಬಿ.ಎ) ವಿದ್ಯಾರ್ಥಿಯಾಗಿದ್ದಾಗಲೇ ಕವಿತೆ ಬರೆಯಲು ಆರಂಭಿಸಿದರು. ಬೆಂಗಳೂರಿನ ಕ್ರೈಸ್ಟ್‌ ಕಾಲೇಜು ಕನ್ನಡ ಸಂಘ ಏರ್ಪಡಿಸಿದ್ದ ಕವನ ಸ್ಪಧೆಯಲ್ಲಿ ಬಹುಮಾನ ಪಡೆದಿರುವ ಮಹೇಶ ಅವರು ’ರೊಟ್ಟಿ ಬೇಯಲು ಪ್ರೇಮದ ಬೂದಿ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಹಾಯ್‌ ಬೆಂಗಳೂರು’ ಪತ್ರಿಕೆಯಲ್ಲಿ ಸಿನಿಮಾ ಪತ್ರಕರ್ತರಾಗಿ ವೃತ್ತಿಜೀವನ ...

READ MORE

Related Books