ಬೆಳ್ಳಿತೆರೆ ಬೆಳಗಿದವರು` ಪುಸ್ತಕ ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಸಾಧಕರ ಬಗ್ಗೆ ಮಾಹಿತಿಪೂರ್ಣ ಕೃತಿ. ಕನ್ನಡ ಚಲನಚಿತ್ರರಂಗದ 115 ಮಂದಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಚಲನಚಿತ್ರ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಸಾಹಿತಿಗಳು, ಹಿನ್ನೆಲೆ ಗಾಯಕ ಗಾಯಕಿಯರು, ತಂತ್ರಜ್ಞರ ಬಗ್ಗೆ ಪರಿಚಯ ಲೇಖನಗಳು ಪುಸ್ತಕದಲ್ಲಿವೆ. ಕನ್ನಡ ಚಿತ್ರರಂಗಕ್ಕಾಗಿ ದುಡಿದವರನ್ನು ಗುರುತಿಸುವ ಪ್ರಯತ್ನದ ಜೊತೆ ಕನ್ನಡ ಚಿತ್ರರಂಗದ ತೆರೆಯ ಮೇಲೆ, ತೆರೆಯ ಹಿಂದೆ ದುಡಿಯುವ ಮೂಲಕ ಚಿತ್ರರಂಗವನ್ನು ಶ್ರೀಮಂತಗೊಳಿಸುತ್ತಾ ಬಂದ ವ್ಯಕ್ತಿ-ಶಕ್ತಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.
©2025 Book Brahma Private Limited.