ಲೇಖಕ -ಪತ್ರಕರ್ತ ಗಂಗಾಧರ ಮೊದಲಿಯಾರ್ ಅವರು ಬರೆದ ಕೃತಿ-ಚಲನಚಿತ್ರ ಪತ್ರಿಕೋದ್ಯಮ. ಪತ್ರಿಕೋದ್ಯಮದಲ್ಲಿ ಸಿನಿಮಾ ವಿಭಾಗವು, ಓದುಗರ ಬೇಡಿಕೆ, ಪ್ರಸಾರ, ಪ್ರಚಾರ ಹಾಗೂ ಜಾಹೀರಾತು ದೃಷ್ಟಿಯಿಂದ ಪ್ರಮುಖ. ಸಿನಿಮಾ ಬರಹವು ಓದುಗರನ್ನು ಆಕರ್ಷಿಸುತ್ತದೆ. ಕತೆ-ಕವನ, ಹಾಡುವ ಕುಣಿಯುವ ಮನೋಧರ್ಮವು ಎಲ್ಲರನ್ನೂ ಸೆಳೆಯುತ್ತದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಒಂದು ರಂಜನೆಯ ವಿಷಯವಾಗದೇ ಅದು ಸಂಸ್ಕೃತಿಯ ವಿಸ್ತಾರ-ಆಳದ ಸ್ವರೂಪವನ್ನೂ ತೋರುತ್ತದೆ. ವಿಶ್ಲೇಷಣೆಗೂ ವಿಫುಲ ಸಾಮಗ್ರಿ ಒದಗಿಸುತ್ತದೆ. ‘ಚಲನಚಿತ್ರ ಇತಿಹಾಸದ ಪುಟಗಳಲ್ಲಿ’ ಎಂಬ ಕೃತಿ ಬರೆದಿರುವ ಇದೇ ಲೇಖಕರು ಪ್ರಜಾವಾಣಿಯಲ್ಲಿ ‘ಫಿಲಂಡೈರಿ’ ಎಂಬ ಅಂಕಣ ಬರಹಗಾರರೂ ಆಗಿದ್ದರು. ಆದ್ದರಿಂದ, ಪತ್ರಿಕೋದ್ಯಮದಲ್ಲಿ ಚಲನಚಿತ್ರ ಸಾಹಿತ್ಯ ಬರವಣಿಗೆಯು ಇವರಿಗೆ ಸಾಧ್ಯವಾಗಿದೆ ಮಾತ್ರವಲ್ಲ; ಸಿನಿಮಾ ಕುರಿತು ಬರೆಯುವ ಪತ್ರಕರ್ತರಿಗೂ ಈ ಕೃತಿ ಉತ್ತಮ ಮಾರ್ಗದರ್ಶಿಯಾಗಿದೆ.
ಏಕೆ ಆಕರ್ಷಣೆ?, ಹೋಮ್ ವರ್ಕ ಇರಲಿ, ಸಿನಿಮಾ ವರದಿಗಾರರ ಶೈಲಿ, ಸಿನಿಮಾ ಜಾಹೀರಾತು ಮತ್ತು ಓದುಗ, ಸಿನಿಮಾ ಪತ್ರಿಕೆಗಳ ಉದಯಕಾಲ, ಚಲನಚಿತ್ರ ಪತ್ರಿಕೆಗಳ ಕನ್ನಡನಾಡಿನಲ್ಲಿ, ಚಲನಚಿತ್ರ ವಿಮರ್ಶೆ, ಚಲನಚಿತ್ರೋತ್ಸವ, ಗಾಸಿಪ್, ಭಾರತೀಯ ಸಿನಿಮಾದ ಹುಟ್ಟು, ದಾದಾಸಾಹೇಬ ಫಾಲ್ಕೆ, ಕನ್ನಡ ವಾಕ್ಚಿತ್ರದ ಉದಯಕಾಲ, ಕನ್ನಡ ಚಲನಚಿತ್ರ ನೀತಿ-2011 ಹೀಗೆ ವಿವಿಧ ಅಧ್ಯಾಯಗಳಡಿ ‘ಚಲನಚಿತ್ರ ಪತ್ರಿಕೋದ್ಯಮ’ ವಿಷಯವನ್ನು ಸಮಗ್ರವಾಗಿ ಚರ್ಚಿಸಲಾಗಿದೆ.
©2024 Book Brahma Private Limited.