ಲೇಖಕ ಚಂದ್ರಶೇಖರ ಆಲೂರು ಅವರ ಕೃತಿ ಲೇಖನ ಕೃತಿ ʻಗೀತ ಸಂಗೀತʼ. ಪ್ರಸ್ತುತ ಕೃತಿ ಸಾಹಿತಿಯಾಗಿ, ಕವಿಯಾಗಿ ಚಿತ್ರರಂಗ ಪ್ರವೇಶಿಸಿದ ಕುಣಿಗಲ ಪ್ರಭಾಕರ ಶಾಸ್ತ್ರಿ, ಜಿ.ವಿ. ಅಯ್ಯರ್, ಕು.ರಾ.ಸೀ., ಚಿ. ಸದಾಶಿವಯ್ಯ, ಆರ್.ಎನ್.ಜೆ., ಕುರಾಸೀ ಮುಂತಾದ ಗೀತರಚನೆಕಾರರ ಪರಿಚಯ ಹಾಗೂ ಅವರು ಸಂಗೀತ ನೀಡಿದ ಚಿತ್ರಗಳ ಕುರಿತು ವಿವರಿಸುತ್ತದೆ. ಕನ್ನಡ ಚಿತ್ರರಂಗದಲ್ಲಿ ಇವರು ಬೆಳೆದುಬಂದ ಬಗೆ, ಅವರ ಸಾಹಿತ್ಯ ಹಾಗೂ ಸಿನಿಮಾ ಜೀವನ, ಕೊಡುಗೆಗಳನ್ನು ಪರಿಚಯಿಸುವ ಪ್ರಯತ್ನವನ್ನು ಲೇಖಕರು ಇಲ್ಲಿ ಮಾಡಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಯ ಕಂಠದಿ, ನೀಲಿ ಗಗನದಿ ತೇಲಿ ಹುಡುಕಿದೆ, ಅಂಕದ ಪರದೆ ಜಾರಿದ ಮೇಲೆ, ವೈದೇಹಿ ಏನಾದಳೋ, ಒಲವೇ ಯಮುನಾ ನದಿಯಾಗಲಿ, ಕರೆಯೇ ಕೋಗಿಲೆ ಮಾಧವನಾ, ಈ ಜೀವನ ಬೇವು ಬೆಲ್ಲ, ಜನನ ಮರಣೊಂದು ಚದುರಂಗವಾಗಿ, ಬರೆಯದ ಕೈಗಳು ಬರೆಯುತಿವೆ, ನೀ ನಡೆವ ಹಾದಿಯಲ್ಲಿ ಮುಂತಾದ ಶೀರ್ಷಿಕೆಗಳಲ್ಲಿ ಲೇಖನಗಳಿವೆ.
©2025 Book Brahma Private Limited.