ವಿಶ್ಸ ಚಲನಚಿತ್ರೋತ್ಸವದ ಗಮನ ಸೆಳೆದ ಚಲನಚಿತ್ರ-ಪಥೇರ್ ಪಾಂಚಾಲಿ. ಸತ್ಯಜೀತ್ ರಾಯ್ ಅದನ್ನು ನಿರ್ದೇಶಿಸಿದ್ದರು. ಆ ಚಲನಚಿತ್ರದ ಪೂರ್ಣ ಪ್ರತಿಯನ್ನು ಕೆ.,ವಿ. ಸುಬ್ಬಣ್ಣ ಅವರು ಅನುವಾದ ಮಾಡಿದ ಕೃತಿಯೇ ಪಥೇರ್ ಪಾಂಚಾಲಿ.
ಕೃತಿಯ ಮೊದಲಿಗೆ-’ಕಿರುದಾರಿಯ ಮೇಲೆ ದೀರ್ಘಕಾಲ’ ಶೀರ್ಷಿಕೆಯಡಿ ಪಥೇರ್ ಪಾಂಚಾಲಿ ಚಲನಚಿತ್ರದ ಶೂಟಿಂಗ್ ಮಾಡಲು ತೆರಳುವ ಮೊದಲ ದಿನದ ಅನುಭವ ಮಾತ್ರವಲ್ಲದೇ, ಅದು ಪೂರ್ಣಗೊಂಡ ಬಗೆ, ಈ ಮಧ್ಯೆ ಪಟ್ಟ ಶ್ರಮ-ನೋವು-ಸಂತಸ-ಭರವಸೆ ಇತ್ಯಾದಿ ಬಗ್ಗೆ ಸ್ವತಃ ಸತ್ಯಜೀತ್ ರಾಯ್ ಬರೆದ ಲೇಖನದ ಪೂರ್ಣಪಾಠದ ಅನುವಾದ ಇದೆ.
ನಂತರದ ಅಧ್ಯಾಯ-‘ಸತ್ಯಜೀತ್ ರಾಯ್ ಮತ್ತು ಅಪೂ ತ್ರಿವಳಿಗಳು’ ನಲ್ಲಿ ಪಥೇರ್ ಪಾಂಚಾಲಿ ಕಥೆಯ ವಿವರ, ರಾಯ್ ನಿರ್ದೇಶಿಸಿದ್ದ ಸಿನೆಮಾಗಳು ಹಾಗೂ ಮೂರನೇ ಅಧ್ಯಾಯದಲ್ಲಿ ಪ್ರೊ. ಸತೀಶ್ ಬಹಾದುರ್ ಲೇಖನ ಆಧರಿಸಿ ‘ಪಥೇರ್ ಪಾಂಚಾಲಿಯ ವ್ಯಕ್ತಿ-ಪರಿಸರಗಳು’ ಶೀರ್ಷಿಕೆಯಡಿ ಬರೆದ ಲೇಖನವಿದೆ.ತದನಂತರ, ಬಂಗಾಳಿ ಮೂಲದ ಈ ಚಲನಚಿತ್ರದ ಪೂರ್ಣಪಾಠ ಕನ್ನಡದಲ್ಲಿ ಓದಬಹುದು.
©2024 Book Brahma Private Limited.