‘ಈ ನರಕ ಈ ಪುಲಕ’ ಸಿನಿಮಾ ಕುರಿತ ಲಂಕೇಶರ ಬರಹಗಳ ಪುಟ್ಟ ಸಂಕಲನ, ಈ ಕೃತಿಯನ್ನು ಪಾರ್ವತೀಶ ಬಿಳಿದಾಳೆ ಅವರು ಸಂಗ್ರಹಿಸಿದ್ದಾರೆ. ತಮ್ಮ ಬದುಕಿನ ಬಹುಪಾಲು ಅವಧಿಯನ್ನು ಬರವಣಿಗೆಯಲ್ಲೇ ಕಳೆದ ಲಂಕೇಶ್ 1975 ರಿಂದ 80ರ ನಡುವೆ ನಾಲ್ಕು ಸಿನಿಮಾಗಳನ್ನು ಮಾಡಿದರು. ಅವರ ಮೊದಲ ಚಿತ್ರ ‘ಪಲ್ಲವಿ’ ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆಯಿತು. ನಂತರ ಅನುರೂಪ, ಖಂಡವಿದೆಕೋ- ಮಾಂಸವಿದೆಕೊ ಸಿನಿಮಾ ಮಾಡಿದರು. ಅಷ್ಟೇನೂ ಯಶಸ್ಸು ಪಡೆಯದ ಸಿನಿಮಾಗಳವು. ಲಂಕೇಶ್ ನಿರ್ದೇಶಿಸಿದ ಕೊನೆಯ ಚಿತ್ರ ಎಲ್ಲಿಂದಲೋ ಬಂದವರು. ಕ್ಯಾಥರೀನ್
ಆನ್ ಪೋರ್ಟರ್ ಳ ನೂನ್ ವೈನ್ ಎಂಬ ಕತೆಯ ಎಳೆಯನ್ನು ಆಧರಿಸಿ ಸಿದ್ಧಗೊಂಡಿತ್ತು. ಈ ಚಿತ್ರ ಅಪಾರ ಯಶಸ್ಸು ಪಡೆಯಿತು. ಅಲ್ಲಿಂದಾಚೆಗೆ ಸುಮಾರು 20 ವರ್ಷ ನೇರ ಸಿನಿಮಾದಿಂದ ದೂರ ಉಳಿದ ಲಂಕೇಶರನ್ನು ಬರವಣಿಗೆ ಹಾಗ ಲಂಕೇಶ್ ಪತ್ರಿಕೆ ಮತ್ತು ಕರ್ನಾಟಕ ಪ್ರಗತಿರಂಗದ ಚಟುವಟಿಕೆಗಳು ಹಿಡಿದಿರಿಸಿಕೊಂಡಿದ್ದವು. ಅವರು ಸಿನಿಮಾ ಕುರಿತು ಬರೆದ ಬರಹಗಳ ಸಂಕಲನ ಈ ಕೃತಿ.
©2024 Book Brahma Private Limited.