ಚಲನಚಿತ್ರಗಳ ಕುರಿತು ಬರೆದ ಪ್ರಬಂಧಗಳ ಸಂಕಲನ-ನಮೋ ವೆಂಕಟೇಶ. ಪತ್ರಕರ್ತ ಚ.ಹ. ರಘುನಾಥ ಅವರ ಕೃತಿ ಇದು. ಶಾಪ ವಿಮೋಚನೆಯ ಹಂಬಲದಲ್ಲಿ ಅಭಿಜ್ಞಾನದ ಹುಡುಕಾಟ, ಬೆಟ್ಟ ಬಯಲು, ಒಲವು ಹೊನಲು, ಧನುರ್ಧಾರಿ ರಾಮಘೋಷದ ನಡುವೆ ಪ್ರೇಮಮೂರ್ತಿಯ..., ಗ್ರಾಮಭಾರತದ ಸಶಕ್ತ ಚಿತ್ರಪಟ, ಬಿಎಫ್ ಜಿ ಎನ್ನುವ ಹದಿನಾರಾಣೆ ಕೃಷಿಕ, ಬತ್ತಿದ ಕೆರೆಯಂಗಳದಲ್ಲಿ ಹಾಡು ಹಕ್ಕಿ, ಮಂಜುನಾಥ! ಮೇಡ್ ಇನ್ ಕನ್ನಡ, ಗಾಂಧಿ ಮಾರ್ಗದ ಒಳಗೂ ಹೊರಗೂ, ಅರೆ ಶತಮಾನದ ಮಹಾಮೌನ, ಮಾನವೀಯತೆ ಕಿಂದರಿ ಮಿಡಿವ ಕಿನ್ನರಿ ಹೀಗೆ ಒಟ್ಟು 20 ಪ್ರಬಂಧಗಳನ್ನು ಸಂಕಲಿಸಲಾಗಿದೆ.
ಟೆಂಟು-ಶೆಡ್ಡು ತಲೆಮಾರಿನ ಪ್ರೇಕ್ಷಕರ ಮನಸ್ಸಿನಲ್ಲಿ ಮಧುರ ಸ್ಮೃತಿಯಾಗಿ ಉಳಿದಿರುವ ‘ನಮೋ ವೆಂಕಟೇಶ’, ಕನ್ನಡ ಸಿನಿಮಾ ಸಂವೇದನೆಯ ಭಾಗವೂ ಆಗಿದೆ. ಆಯ್ದ ಕನ್ನಡ ಸಿನಿಮಾಗಳ ವಿಶ್ಲೇಷಣೆಯ ಪ್ರಯತ್ನದ ಇಲ್ಲಿನ ಬರಹಗಳು ಸಿನಿಮಾಗಳನ್ನು ಸಾಂಸ್ಕೃತಿಕ ಸಮಾಜಿಕ ಪಠ್ಯದ ರೂಪದಲ್ಲಿ ನೋಡುವ ರಸಸ್ವಾದದ ಪ್ರಯತ್ನಗಳಾಗಿವೆ ಎಂದು ಲೇಖಕರು ಹೇಳಿದ್ದಾರೆ.
©2025 Book Brahma Private Limited.