ಸಿನಿ ಲೋಕ 2021

Author : ಎ.ಎನ್. ಪ್ರಸನ್ನ

₹ 350.00




Year of Publication: 2023
Published by: ಪಾಂಚಜನ್ಯ ಪ್ರಕಾಶನ
Address: ಮಣಿಮಜಲು ಮನೆ, ಕಳಂಜ ಗ್ರಾಮ, ಸುಳ್ಯ ತಾಲೂಕು-574212
Phone: 8861193454

Synopsys

ಲೇಖಕ ಎ.ಎನ್.‌ ಪ್ರಸನ್ನ ಅವರ ಆಯ್ದ ಜಾಗತಿಕ ಸಿನಿಮಾಗಳ ಕುರಿತ ಲೇಖನ ಸಂಕಲನ ʻಸಿನಿ ಲೋಕ 2021'. ಇಪ್ಪತ್ತೊಂದನೆ ಶತಮಾನದ ಮೊದಲಿನ ಈ ಎರಡು ದಶಕಗಳಲ್ಲಿ ಜಗತ್ತಿನಲ್ಲಿ ಮೂಡಿಬಂದ ಚಿತ್ರಗಳಲ್ಲಿ ಆಯ್ದ ನಲವತ್ತು ಚಿತ್ರಗಳ ಕುರಿತು ಪ್ರಸ್ತುತ ಪುಸ್ತಕ ಹೇಳುತ್ತದೆ. ಸಿನಿಮಾ ಮಾಧ್ಯಮ ಪ್ರತಿ ಹದಿನೈದು-ಇಪ್ಪತ್ತು ವರ್ಷಗಳಿಗೊಮ್ಮೆ ಭಾಷೆ-ಸಂವಹನ ಕುರಿತ ಚಿಂತನೆಗಳನ್ನು ಪರಿಷ್ಕರಿಸುತ್ತಾ, ಕಾಲದಿಂದ ಕಾಲಕ್ಕೆ ಬದಲಾಗುತ್ತಿರುವ ಪ್ರೇಕ್ಷಕನನ್ನು ಸೆರೆಹಿಡಿದಿಟ್ಟುಕೊಳ್ಳಲು ಹೊಸ ತಂತ್ರಗಳನ್ನು ಬಳಸುತ್ತಾ ಬೆಳವಣಿಗೆ-ಬದಲಾವಣೆಗಳನ್ನು ಕಾಣುತ್ತಾ ಸಾಗಿದೆ. ಹೀಗೆ ಜಗತ್ತಿನಲ್ಲಿ ಮೂಡಿದ ಎಲ್ಲಾ ವಿಪ್ಲವಗಳಿಗೆ ಪ್ರತಿಸ್ಪಂದಿಸುತ್ತಾ ಬಂದ ಜಾಗತಿಕ ಸಿನಿಮಾ ಇಪ್ಪತ್ತೊಂದನೆಯ ಶತಮಾನದ ಬೆಳವಣಿಗೆಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಇಲ್ಲಿಯ ನಲವತ್ತು ಸಿನಿಮಾಗಳು ದಾಖಲಿಸುತ್ತವೆ.

About the Author

ಎ.ಎನ್. ಪ್ರಸನ್ನ

ಎ. ಎನ್. ಪ್ರಸನ್ನ ಅವರು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರು, ಸಾಹಿತ್ಯ, ನಾಟಕ ಮತ್ತು ದೃಶ್ಯ ಮಾಧ್ಯಮದಲ್ಲಿ ಆಸಕ್ತಿ. ಉಳಿದವರು (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ರಥಸಪ್ತಮಿ(ಬಿ. ಎಚ್.ಶ್ರೀಧರ ಪ್ರಶಸ್ತಿ), ಪ್ರತಿಫಲನ (ಮಾಸ್ತಿ ಕಥಾ ಪುರಸ್ಕಾರ) ಸೇರಿದಂತೆ ಐದು ಕಥಾ ಸಂಕಲನಗಳು ಮತ್ತು ಆಯ್ದ ಕಥೆಗಳ ಸಂಕಲನ ಪ್ರಕಟವಾಗಿವೆ. ನೂರು ವರ್ಷದ ಏಕಾಂತ (ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‌ನ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟೂಡ್' ಕಾದಂಬರಿಯ ಅನುವಾದ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿ), ಮೂರನೆ ದಡ (ಪ್ರಪಂಚದ ಮಾಂತ್ರಿಕ ವಾಸ್ತವತೆಯ ಕಥೆಗಳು), ಒಂದಾನೊಂದು ...

READ MORE

Related Books