ಪ್ರತಿಷ್ಠಿತ ಸ್ವರ್ಣಕಮಲ ಪುರಸ್ಕಾರ ಪಡೆದ ಚಲನಚಿತ್ರ ಕುರಿತ ಕನ್ನಡದ ಮೊದಲ ಗ್ರಂಥ ’ಸಿನಿಮಾ ಯಾನ’. ಪತ್ರಿಕೋದ್ಯಮ, ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಡಾ.ಕೆ. ಪುಟ್ಟಸ್ವಾಮಿ ಕೃತಿಯ ಲೇಖಕರು.
ಕನ್ನಡದ ಸಿನಿ ಇತಿಹಾಸವನ್ನು ವಿಶಿಷ್ಟ ರೀತಿಯಲ್ಲಿ ಮಂಡಿಸುವ ಕೃತಿ ಹಲವು ಸ್ವಾರಸ್ಯಕರ ಸಂಗತಿಗಳ ಮೂಲಕ ಗಮನ ಸೆಳೆಯುತ್ತದೆ. ಇತಿಮಿತಿಗಳ ನಡುವೆಯೇ ಹಬ್ಬಿದ ಕನ್ನಡ ಸಿನಿಲೋಕ, ತೆರೆಯ ಹಿಂದಿನ ಕತೆಗಳು, ಕಪ್ಪು-ಬಿಳುಪಿನಿಂದ ವರ್ಣಚಿತ್ರಕ್ಕೆ ಹೊರಳಿದ ಮನ್ವಂತರದ ಘಟ್ಟ. ಹೊಸ ಅಲೆಯ ಚಲನಚಿತ್ರಗಳು ಮೂಡಿಬಂದ ಬಗೆ. ಸಿನಿಮಾ ತಂತ್ರಜ್ಞರು ಚಿತ್ರಗಳನ್ನು ನಿರ್ಮಿಸಲು ನಡೆಸುತ್ತಿದ್ದ ಹೋರಾಟ ಎಲ್ಲವೂ ಕೃತಿಯಲ್ಲಿ ಚಿತ್ರಿತ.
©2025 Book Brahma Private Limited.