ನಾಟ್ಯರಂಗ-ಚಿತ್ರರಂಗ

Author : ಬಿ. ಪುಟ್ಟಸ್ವಾಮಯ್ಯ

Pages 153

₹ 4.00




Year of Publication: 1948
Published by: ಪ್ರತಿಭಾ ಗ್ರಂಥಮಾಲೆ
Address: ಬೆಂಗಳೂರು

Synopsys

ನಾಟ್ಯರಂಗ-ಚಿತ್ರರಂಗ-ಬಿ.ಪುಟ್ಟಸ್ವಾಮಯ್ಯ ಅವರು ಬರೆದ ಪ್ರಬಂಧಗಳ ಸಂಕಲನ. ನಾಟಕ ಹಾಗೂ ಚಲನಚಿತ್ರಗಳ ಕುರಿತು ಆಗಾಗ ಬರೆದ ಲೇಖನಗಳು ವಾಕ್ಚಿತ್ರ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಅವುಗಳನ್ನೇ ಇಲ್ಲಿ ಸಂಗ್ರಹಿಸಲಾಗಿದೆ. ನಾಟಕ ಮತ್ತು ಚಲನಚಿತ್ರಗಳಿಗೆ ಸಂಬಂಧಿಸಿದ ಪ್ರಾಥಮಿಕ ಮಾಹಿತಿಗಳನ್ನು ಇಲ್ಲಿಯ 9 ಪ್ರಬಂಧಗಳು ನೀಡುತ್ತವೆ. ಕೃತಿಯಲ್ಲಿ ನಟರು-ನಾಟಕಗಳು, ಪ್ರೇಕ್ಷಕರು ಹಾಗೂ ಪ್ರಯೋಕ್ತೃಗಳು, ಅಭಿನಯ, ರಂಗಾಲಂಕಾರ, ಮಾಂಟೇಜ್, ಪ್ರಾಚನರ ಕಾಲದಲ್ಲಿ ಭಾರತೀಯರ ವೇಷಭೂಷಣಗಳು, ಅಭಿನಯ ಶಿಕ್ಷಣ, ನಾಟಕ ಮತ್ತು ಚಲನಚಿತ್ರ, ಅಭಿಸಾರ, ನಾಟ್ಯರಂಗ-ಚಿತ್ರರಂಗ ಹೀಗೆ ವಿವಿಧ ಶೀರ್ಷಿಕೆಗಳಡಿ ನಾಟಕ ಹಾಗೂ ಚಲನಚಿತ್ರಕ್ಕೆ ಸಂಬಂಧಿಸಿದ ಪ್ರಾಥಮಿಕ ಮಾಹಿತಿ ನೀಡಲು ಯತ್ನಿಸಲಾಗಿದೆ.

About the Author

ಬಿ. ಪುಟ್ಟಸ್ವಾಮಯ್ಯ
(27 May 1897 - 25 January 1984)

ಕನ್ನಡ ನಾಟಕ ಸಾಹಿತ್ಯ ಮತ್ತು ಕಾದಂಬರಿ ಲೋಕಕ್ಕೆ ತಮ್ಮ ವಿಶಿಷ್ಟ ಕೊಡುಗೆಗಳ ಮೂಲಕ ಗಮನ ಸೆಳೆದವರು ಬಿ. ಪುಟ್ಟಸ್ವಾಮಯ್ಯ. ಪತ್ರಿಕೋದ್ಯಮಿ, ನಾಟಕಕಾರ, ಕಾದಂಬರಿಕಾರ, ಕಥೆಗಾರ, ಕವಿಯಾಗಿ ಅನುಪಮ ಕೊಡುಗೆ ನೀಡಿದ ಪುಟ್ಟಸ್ವಾಮಯ್ಯ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. 1897ರ ಮೇ 27ರಂದು ಜನಿಸಿದ ಪುಟ್ಟಸ್ವಾಮಿ ಅವರ ತಂದೆ ಬಸಪ್ಪಯವರು ರೇಷ್ಮೆ ವ್ಯಾಪಾರಿಯಾಗಿದ್ದರು. ತಾಯಿ ಬಸಮ್ಮ. ಬೆಂಗಳೂರಿನ ಸುಲ್ತಾನ್‌ಪೇಟೆ ಹಿಂದೂ ಎ.ವಿ. ಶಾಲೆಯಲ್ಲಿ  ಆರಂಭಿಕ ಶಿಕ್ಷಣ ಪಡೆದರು. ನಂತರ ಹೆಚ್ಚಿನ ಅಧ್ಯಯನಕ್ಕಾಗಿ ಸೈಂಟ್ ಜೋಸೆಫ್ ಕಾಲೇಜ್ ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ ತಂದೆಯವರನ್ನು ಕಳೆದುಕೊಂಡದ್ದರಿಂದ ಕುಟುಂಬದ ಜವಾಬ್ದಾರಿ ಹೊರಬೇಕಾಯಿತು. ಅದರಿಂದಾಗಿ ...

READ MORE

Related Books