ಟಿ.ಎಸ್. ನಾಗಾಭರಣ ಅವರು ಕನ್ನಡ ಚಲನಚಿತ್ರ ವಲಯದಲ್ಲಿ ಬಹು ದೊಡ್ಡ ಹೆಸರು. ವಿವಿಧ ವಿಚಾರ ಸಂಕಿರಣಗಳಲ್ಲಿ, ಚಿತ್ರೋತ್ಸವಗಳಲ್ಲಿ ಸಿನಿಮಾ ಕುರಿತಂತೆ ವ್ಯಕ್ತಪಡಿಸಿದ ವಿಚಾರಗಳ ಧ್ವನಿಮುದ್ರಣಗಳನ್ನು ಅಕ್ಷರ ರೂಪಕ್ಕೆ ಇಳಿಸಿರುವ ವಿಶೇಷತೆಯೇ ಈ ಕೃತಿ ‘ನಾಗಾರಭರಣ ಸಿನಿಮಾವರಣ’. ಗುಬ್ಬಿಗೂಡು ರಮೇಶ್ ಹಾಗೂ ಎನ್.ಕೆ. ಪದ್ಮನಾಭ ಅವರು ಕೃತಿಯ ಸಂಪಾದಕರು. ’
ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಜಯಂತ್ ಕಾಯ್ಕಿಣಿ ’ ಒಬ್ಬ ಕವಿ ಬರೆಯುವಾಗ ಮಾತ್ರ ಕವಿ, ಒಬ್ಬ ಹಾಡುಗಾರ ಹಾಡುವಾಗ ಮಾತ್ರ ಹಾಡುಗಾರ. ಸಚಿನ್ ತೆಂಡೂಲ್ಕರ್ ಬ್ಯಾಟ್ ಮಾಡುವಾಗ ಮಾತ್ರ ಬ್ಯಾಟ್ಸ್‌ಮ್ಯಾನ್, ನಾವು ಉಳಿದ ಟೈಮ್ನಲ್ಲಿ ಕವಿ ಥರ ಓಡಾಡಿಬಿಡ್ತೀವಿ. ನಾವು ಉಳಿದ ಟೈಮ್ನಲ್ಲಿ ತೀವ್ರವಾಗಿ ಬದುಕಬೇಕು, ಬರೆಯುವಾಗ ಆ ತೀವ್ರತೆ ಬರುತ್ತದೆ. ಹಾಗೆ ಒಬ್ಬ ನಿರ್ದೇಶಕ ಚಿತ್ರ ಮಾಡುವಾಗ ಎಲ್ಲ ಫ್ಯಾಕಲ್ಟಿಗಳು ಜೊತೆಗೇ ಬರುತ್ತವೆ. ಆ ಥರದ ಫ್ಯಾಕಲ್ಟಿಗಳನ್ನು ಓಪನ್ ಆಗಿರಿಸಿಕೊಂಡಂತಹ ನಿರ್ದೇಶಕ ನಾಗಾಭರಣ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.