About the Author

ಉಜಿರೆಯ ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿರಾಟ್ ಪದ್ಮನಾಭ ವಿಜಯ ಕರ್ನಾಟಕ, ವಿಜಯ ಟೈಮ್ಸ್, ಹಾಗೂ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್  ಪತ್ರಿಕೆಗಳಲ್ಲಿ ವರದಿಗಾರರಾಗಿ ಕಾರ್ಯನಿರ್ವಸಿದ್ದಾರೆ.

ಕನ್ನಡ ಸಿನಿಮಾಗಳ ಕುರಿತ ಇವರ ಸಂಶೋಧನಾತ್ಮಕ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ  ನೀಡಿದೆ. ಸಮೂಹ ಮಾಧ್ಯಮ ಸಂವಹನದ ಕುರಿತು ಇವರು ಬರೆದ 9 ವಿಶ್ಲೇಷಣಾತ್ಮಕ ಕೃತಿಗಳು ಪ್ರಕಟವಾಗಿವೆ. ಕವಿತೆಗಳ ರಚನೆ ಇವರ ಪ್ರೀತಿಯ ಸೃಜನಾತ್ಮಕ ಆದ್ಯತೆ. ಸಂಗೀತ ಹೃದಯಕ್ಕೆ ಹತ್ತಿರವಾದ ಆಸಕ್ತಿ.  ನಾರ್ಸಿ ಮೆಹ್ತಾ ಬರೆದ  ಗುಜರಾತಿ ಭಜನ್ ಆಧಾರಿತ ' ಪರಹಿತ ಬಯಸೋ' ಅನುವಾದಿತ ಗೀತೆ ಮ್ಯೂಸಿಕ್ ಆಲ್ಬಂ ಆಗಿ ಜನಪ್ರಿಯವಾಗಿದೆ. ಇವರ ಗೀತರಚನೆ ಮತ್ತು ರಾಗಸಂಯೋಜನೆಯ ' ನೆನಪಿನ ಮಳೆಹನಿ' ಮ್ಯೂಸಿಕ್ ಆಲ್ಬಂ ಆನಂದ್ ಆಡಿಯೋ ಮೂಲಕ ಬಿಡುಗಡೆಗೊಂಡು ಜನಪ್ರಿಯವಾಗಿದೆ. ಪತ್ರಿಕಾ ಬರಹಗಳು, ಸಂಶೋಧನಾತ್ಮಕ ಬರವಣಿಗೆಗೆ ಇರುವ ಗಟ್ಟಿತನ, ಗಾಂಭೀರ್ಯತೆ ದೃಶ್ಯ ಸಂವಹನಕ್ಕೂ ಇದೆ ಎನ್ನುವುದು ಇವರ ಸ್ಪಷ್ಟ ನಿಲುವು. ಎಸ್ ಡಿ ಎಂ ಮಲ್ಟಿಮೀಡಿಯಾ ಸ್ಟುಡಿಯೋ ಸೇರಿದಂತೆ ಮತ್ತಿತರ ದೃಶ್ಯ ಮಾಧ್ಯಮಗಳಿಗಾಗಿ ಇವರು ನಡೆಸಿಕೊಟ್ಟಿರುವ ಸಂದರ್ಶನಗಳು ಈ ನಿಲುವನ್ನು ದೃಢಪಡಿಸಿವೆ.

‘ಟಿ.ಎಸ್. ನಾಗಾಭರಣ ಅವರ ಚಲನಚಿತ್ರಗಳು: ಒಂದು ವಿಶ್ಲೇಷಣಾತ್ಮಕ ಅಧ್ಯಯನ' ಶೀರ್ಷಿಕೆಯಲ್ಲಿ ಸಿದ್ಧಪಡಿಸಿದ್ದ ಸಂಶೋಧನ ಮಹಾಪ್ರಬಂಧವನ್ನು 'ಅನನ್ಯ ಹಾದಿಯ ಹೆಜ್ಜೆಗಳು' ಮೂಲಕ ಕೃತಿಯ ರೂಪಕ್ಕಿಳಿಸಿದ್ದಾರೆ. ದಿಗ್ದರ್ಶಕ ಧ್ವನಿ ಇವರ ಮತ್ತೊಂದು ಕೃತಿಯಾಗಿದೆ. 

 

ವಿರಾಟ್ ಪದ್ಮನಾಭ